ದಚ್ಚುಗೆ ಬರೋಬ್ಬರಿ 1 ಕೆ.ಜಿ. ತೂಕದ ವಾಚ್‍ ಗಿಫ್ಟ್ ಕೊಟ್ಟವರು ಯಾರು ಗೊತ್ತಾ..?

ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಸ್ನೇಹಿತರ ಬಳಗ ಹೆಚ್ಚು. ತುಂಬಾ ಆಪ್ತ ಸ್ನೇಹಿತರಲ್ಲಿ ಠಾಕೂರ್ ಅನೂಪ್‍ ಸಿಂಗ್ ಕೂಡಾ ಒಬ್ಬರು. ಅನುಪ್‍, ದರ್ಶನ್ ಅಭಿನಯದ ಯಜಮಾನ ಚಿತ್ರದ ವಿಲನ್‍ ಪಾತ್ರಧಾರಿ. ಈ ಚಿತ್ರದಿಂದ ದರ್ಶನ್‍ ಮತ್ತು ಅನುಪ್‍ ತುಂಬಾ ಆತ್ಮೀಯರಾಗಿದ್ದಾರೆ.

ಇನ್ನು ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರದಲ್ಲಿ ಠಾಕೂರ್ ಅನೂಪ್‍ ನಾಯಕ ನಟನಾಗಿ ಅಭಿನಯಿಸುತ್ತಿದ್ಧಾರೆ. ಹೀಗಾಗಿ ನಿನ್ನೆ ನಡೆದ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ದರ್ಶನ್ ಗೆ ಆಹ್ವಾನಿಸಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೆಳೆಯ ದರ್ಶನ್‍ಗೆ, ಅನುಪ್‍ ಉಡುಗೊರೆಯೊಂದನ್ನು ನೀಡಿದ್ದಾರೆ. ಅದೇನು ಅಂದ್ರಾ…..ಬರೋಬ್ಬರಿ 1 ಕೆ.ಜಿ. ತೂಕದ ವಾಚ್‍ ನ್ನು ದರ್ಶನ್‍ಗೆ ಗಿಫ್ಟ್ ಆಗಿ ನೀಡಿದ್ದಾರೆ.

ನಂತರ ಸಮಾರಂಭದಲ್ಲಿ ಮಾತನಾಡಿದ ದರ್ಶನ್‍, ಅನುಪ್‍ ಅವರನ್ನು ಹಾಡಿ ಹೊಗಳಿದ್ರು. ಕನ್ನಡ ಸಿನಿಮಾದಲ್ಲಿ ನಟಿಸಿ ಹಣ ತೆಗೆದುಕೊಂಡು ಹೋಗೋ ನಟರೆ ಹೆಚ್ಚು. ಆದ್ರೆ ಠಾಕೂರ್ ಅನುಪ್‍ ಅವರ ಕೆಲಸದ ಬದ್ಧತೆ ನನಗೆ ಇಷ್ಟವಾಯ್ತು. ಸಿನಿಮಾದಲ್ಲಿ ಅಭಿನಯಿಸಿ, ಡೈಲಾಗ್‍ ಕಲಿತು ಅವರೇ ಡಬ್‍ ಮಾಡ್ತಾರೆ ಇದು ಖುಷಿ ಕೊಡುವ ವಿಚಾರ ಎಂದ್ರು. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಸಿನಿಮಾ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com