ಸೆಲ್ಫಿ ತೆಗೆಸಿಕೊಂಡ್ಲು, ಹೊರಡುವಾಗ ಪ್ರಭಾಸ್ ಕೆನ್ನೆಗೆ ಸಣ್ಣಗೆ ಹೊಡೆದು ಓಡಿ ಹೋದಳು..!

ಬಾಹುಬಲಿಯಿಂದ ಅತ್ಯಂತ ಯಶಸ್ವಿ ನಟನಾದ ಪ್ರಭಾಸ್ ಈಗ ಸಾಹೋ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಈ ವೇಳೆ ಯುವತಿಯೊಬ್ಬಳ ಪ್ರೀತಿಯ ಏಟಿಗೆ ಪ್ರಭಾಸ್ ನಾಚಿ ನೀರಾಗಿರುವ ವಿಡಿಯೊ ಇದೀಗ ವೈರಲ್ ಆಗಿದೆ.

ಇತ್ತೀಚೆಗೆ ಪ್ರಭಾಸ್ ಸಾಹೋ ಚಿತ್ರೀಕರಣಕ್ಕೆ ಲಾಸ್ ಎಂಜಲಿಸ್‌ಗೆ ಹೋಗಿದ್ದರು. ಅಲ್ಲಿದ್ದ  ಪ್ರಭಾಸ್ ಭಾರತೀಯ ಅಭಿಮಾನಿಗಳು ಅವರ ಹತ್ತಿರ ಹೋಗಿ ಸೆಲ್ಫಿ ತೆಗೆಸಿಕೊಳ್ಳತೊಡಗಿದರು.

ಈ ವೇಳೆ ಯುವತಿಯೊಬ್ಬಳು ಸೆಲ್ಫಿ ತೆಗೆಸಿಕೊಂಡು ಹೊರಡುವಾಗ ಪ್ರಭಾಸ್ ಕೆನ್ನೆಗೆ ಸಣ್ಣಗೆ ಹೊಡೆದು ಓಡಿ ಹೋದಳು. ಇದರಿಂದ ಶಾಕ್ ಆದ ಪ್ರಭಾಸ್ ಅವರ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಹಿಂದೆ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋದಲ್ಲಿ ತಾವು ನಾಚಿಕೆ ಸ್ವಭಾವದ ಅಂತರ್ಮುಖಿ ಎಂದು ಪ್ರಭಾಸ್ ಹೇಳಿಕೊಂಡಿದ್ದರು. ಅದನ್ನು ನೋಡುವ ಅವಕಾಶ ಈಗ ಪ್ರಭಾಸ್ ಅಭಿಮಾನಿಗಳಿಗೆ ಸಿಕ್ಕಿದೆ.

Leave a Reply

Your email address will not be published.

Social Media Auto Publish Powered By : XYZScripts.com