ಧೋನಿ ಕ್ರೀಡಾಂಗಣದಲ್ಲಿದ್ರೆ ಅಭಿಮಾನಿಗಳಿಗೆ ಹಬ್ಬ: ತಪ್ಪಿಸಿಕೊಂಡು ಅವಿತುಕೊಂಡ ಮಹೇಂದ್ರ ಸಿಂಗ್

ಮಹೇಂದ್ರ ಸಿಂಗ್ ಧೋನಿ, ಅಭಿಮಾನಿಗಳ ಹಾಟ್‍ ಫೆವರಿಟ್‍ ಆಟಗಾರ. ಧೋನಿ ಕ್ರೀಡಾಂಗಣದಲ್ಲಿದ್ರೆ ಅಭಿಮಾನಿಗಳಿಗೆ ಹಬ್ಬ. ಹೀಗಿರುವಾಗ ನಿನ್ನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಧೋನಿ ಮತ್ತು ಅಭಿಮಾನಿಯೊಬ್ಬನ ನಡುವೆ ನಡೆದ ಹೈಡ್‍ ಅಂಡ್ ಸೀಕ್‍ ಆಟ ಇದೀಗ ಭಾರಿ ವೈರಲ್ ಆಗಿದೆ.

ಬ್ಯಾಟಿಂಗ್ ಮುಗಿಸಿ, ಫೀಲ್ಡಿಂಗ್ ಗೆ ಇಳಿಯುತ್ತಿದ್ದಂತೆ ಅಭಿಮಾನಿಯೊಬ್ಬ ಮೈದಾನದೊಳಕ್ಕೆ ನುಗ್ಗಿದ್ದ. ಈ ವೇಳೆ ಧೋನಿಯನ್ನು ಮುಟ್ಟಲು ಮಂದಾದಾಗ, ಅಲ್ಲಿಂದ ತಪ್ಪಿಸಿಕೊಂಡ ಧೋನಿ, ರೋಹಿತ್‍ ಶರ್ಮಾ ಹಿಂಭಾಗ ಅವಿತುಕೊಂಡಿದ್ರು. ಈ ವೇಳೆ ಅವಿತುಕೊಂಡ ಧೋನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಅಭಿಮಾನಿ ಹಿಡಿದಿದ್ದಾನೆ.

ನಂತರ ಧೋನಿ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದಲ್ಲದೆ, ಅವರನ್ನು ಬಿಗಿದಪ್ಪಿಕೊಂಡಿದ್ದ. ತಕ್ಷಣವೇ ಬಂದ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಕರೆದೊಯ್ದರು. ಈ ವೀಡಿಯೋ ಇದೀಗ ಎಲ್ಲೆಡೆ ಭಾರಿ ವೈರಲ್‍ ಆಗಿದೆ.

Leave a Reply

Your email address will not be published.