ಡಾರ್ಕ್ ಸರ್ಕಲ್ ಗೆ ಏನ್ ಕಾರಣ? ಇದರಿಂದ ದೂರವಿರಲು ಅನುಸರಿಸಬೇಕಾದ ಕೆಲವು ಟಿಪ್ಸ್.. 

ಮಹಿಳೆಯರ ಸೌಂದರ್ಯಕ್ಕೆ ದೊಡ್ಡ ಅಡ್ಡಿ ಅಂದರೆ ಡಾರ್ಕ ಸರ್ಕಲ್. ದೈನಂದಿನ ಚಟುವಟಿಕೆಗಳಿಂದ ಡಾರ್ಕ್ ಸರ್ಕಲ್ ಆಗುತ್ತೆ ಅಂದರೆ ನೀವು ನಂಬಲೆ ಬೇಕು. ಹಾಗಾದರೆ ಈ ಡಾರ್ಕ್ ಸರ್ಕಲ್ ನಿಂದ ಮುಕ್ತಿ ಹೊಂದಲು ಕೆಲವೊಂದಿಷ್ಟು ಟಿಪ್ಸ್ ನಿಮಗಾಗಿ.. ಮಿಸ್ ಮಾಡದೆ ಟ್ರೈ ಮಾಡಿ ನೋಡಿ.

ನಿದ್ರಾ ಹೀನತೆ – ನಿದ್ರಾ ಹೀನತೆಯಿಂದ ರಕ್ತದ ಚಲನೆಗೆ ತೊಂದರೆಯಾಗಿ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಚೆನ್ನಾಗಿ ನಿದ್ರೆ ಮಾಡುವುದರಿಂದ ಡಾರ್ಕ್ ಸರ್ಕಲ್ ನಿಂದ ದೂರವಿರಬಹುದು.

ಮೇಕಪ್ ತೆಗೆಯದೇ ಇರುವುದು – ಮೇಕಪ್ ಕಣ್ಣಿನ ಭಾಗದಲ್ಲಿ ಸರಿಯಾಗಿ ತೆಗೆದೇ ಇರುವುದರಿಂದ ಈ ರೀತಿ ಕಣ್ಣ ಸುತ್ತಲು ಕಪ್ಪು ಆವರಿಸುತ್ತದೆ.

ಕಣ್ಣನ್ನು ಅತೀಯಾಗಿ ಉಜ್ಜಿಕೊಳ್ಳುವುದು – ಕಣ್ಣಿನ ಸೂಕ್ಷ್ಮ ಚರ್ಮವನ್ನು ಪದೇ ಪದೇ ಉಜ್ಜಿಕೊಳ್ಳುವುದರಿಂದ ಹೀಗಾಗಬಹುದು.

ಬಿಸಿಲಿಗೆ ಮೈಯೊಡ್ಡುವುದು – ಬಿಸಿಲಿಗೆ ಮೈಯೊಡ್ಡುವುದು ಡಾರ್ಕ್ ಸರ್ಕಲ್ ಆಗಬಹುದು. ಬಿಸಿಲಿಗೆ ಹೋಗುವ ಮುನ್ನ ಸನ್ ಕ್ರೀಮ್ ಬಳಕೆ ಮಾಡುವುದು ಉತ್ತಮ.

ಬಿಸಿ ನೀರಿನಿಂದ ಮುಖ ತೊಳೆಯುವುದು – ಬಿಸಿ ನೀರಿನಿಂದ ಮುಖ ತೊಳೆಯುವುದರಿಂದ ಚರ್ಮದ ಬಣ್ಣ ಕಳೆದು ಹೋಗಲು ಸಾಧ್ಯವಾಗುತ್ತದೆ. ಹೀಗಾಗಿ ಆದಷ್ಟು ತಣ್ಣನೆಯ ಅಥವಾ ಉಗುರು ಬೆಚ್ಚಗಿನ ನೀರು ಬಳಕೆ ಮಾಡುವುದು ಒಳಿತು.

ಒರಟಾಗಿ ಮೇಕಪ್ ತೆಗೆಯುವುದು – ಕಣ್ಣಿನ ಮೇಕಪ್ ಎಷ್ಟು ನಯವಾಗಿ ನಾಜೂಕಾಗಿ ಮಾಡಿಕೊಳ್ಳುತ್ತೀರೋ ಅಷ್ಟೇ ನಾಜೂಕಾಗಿ, ನಯವಾಗಿ ತೆಗೆದರೆ ಒಳ್ಳೆದು..

ಮಲಗುವ ರೀತಿ ಸರಿ ಇಲ್ಲದೇ ಇದ್ದರೆ – ಎಡ ಬದಿ ಮಲಗುವುದು ರೂಢಿ ಮಾಡಿಕೊಳ್ಳಿ. ಇದರಿಂದ ರಕ್ತ ಚಲನೆಗೆ ಸಹಕಾರಿಯಾಗಿ ಡಾರ್ಕ್ ಸರ್ಕಲ್ ಬಾರದಂತೆ ಸಹಯಕವಾಗುತ್ತದೆ.

ಸರಿಯಾದ ಉತ್ಪನ್ನ ಬಳಕೆ ಮಾಡದೇ ಇರುವುದು – ಕಣ್ಣಿಗೆ ಕ್ರೀಮ್ ಬಳಕೆ ಮಾಡುವಾಗ ಎಚ್ಚರ ವಹಿಸಿ.

ಿಂತೆಲ್ಲಾ ಅಂಶಗಳನ್ನು ನೀವು ಗಮನದಲ್ಲಿ ಇಟ್ಟುಕೊಂಡರೆ ಡಾರ್ಕ್ ಸರ್ಕಲ್ ನಿಂದ ದೂರವಾಗಬಹುದು.

Leave a Reply

Your email address will not be published.

Social Media Auto Publish Powered By : XYZScripts.com