ಚಂದ್ರಿಕಾ ಚಾಪ್ಟರ್ ಕ್ಲೋಸ್ : ‘ಅಗ್ನಿಸಾಕ್ಷಿ’ ಧಾರಾವಾಹಿಯ ಅಸಲಿ ಕಥೆ ಈಗ ಶುರು..!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಎಲ್ಲಾ ಕ್ರಿಮಿನಲ್ ಕೆಲಸಗಳ ಹಿಂದೆ ಚಂದ್ರಿಕಾ ಕೈವಾಡ ಇದೆ ಎಂಬ ಅಂಶ ಇಡೀ ಕುಟುಂಬದ ಅರಿವಿಗೆ ಬಂದಿದೆ. ಮದುವೆ ಮಂಟಪದಲ್ಲಿ ಚಂದ್ರಿಕಾ ಗರ್ವಭಂಗವಾಗಿದೆ. ಕೌಶಿಕ್ ಅಸಲಿಯತ್ತು ಬಯಲಾಗಿದೆ. ಚಂದ್ರಿಕಾ ಮುಖವಾಡ ಕಳಚಿ ಬಿದ್ದಿದೆ. ಅಲ್ಲಿಗೆ ಚಂದ್ರಿಕಾ ಕಥೆ ಮುಗಿಯಿತು…

‘ಅಗ್ನಿಸಾಕ್ಷಿ’ ಧಾರಾವಾಹಿಗೆ ಶುಭಂ ಹಾಡುವ ಕಾಲ ಹತ್ತಿರ ಬಂತು ಅಂತ ನೀವಂದುಕೊಳ್ಳಬಹುದು. ಆದರೆ ವಾಸ್ತವ ಅದಲ್ಲ. ಚಂದ್ರಿಕಾ ಚಾಪ್ಟರ್ ಕ್ಲೋಸ್ ಆಗಬಹುದು. ಆದರೆ ‘ಅಗ್ನಿಸಾಕ್ಷಿ’ ಧಾರಾವಾಹಿ ಮಾತ್ರ ಸದ್ಯಕ್ಕೆ ಮುಗಿಯಲ್ಲ. ಇದಂತೂ ಗ್ಯಾರಂಟಿ.!

”ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ದೊಡ್ಡ ತಿರುವು ಸಿಕ್ಕಿದೆ ನಿಜ. ಎಲ್ಲವೂ ರಿವಿಲ್ ಆಗಿದೆ. ಆದರೆ ಧಾರಾವಾಹಿ ಮಾತ್ರ ಈಗ ಸ್ಟಾಪ್ ಆಗಲ್ಲ” ಎಂದು ಸನ್ನಿಧಿ ಪಾತ್ರದಾರಿ ನಟಿ ವೈಷ್ಣವಿ ಸ್ಪಷ್ಟಪಡಿಸಿದ್ದಾರೆ.

”ಧಾರಾವಾಹಿಯಲ್ಲಿ ನಮಗೆ ಟ್ವಿಸ್ಟ್ ಗಳನ್ನು ನೋಡಿ ಆಶ್ಚರ್ಯ ಆಗುತ್ತಿದೆ. ಅಸಲಿ ಕಥೆ ಈಗ ಶುರುವಾಗುತ್ತಿದೆ. ಒಂದು ಕ್ಯಾರೆಕ್ಟರ್ ನಿಂದ ಸೀರಿಯಲ್ ನಡಿಯಲ್ಲ. ಎಲ್ಲಾ ಪಾತ್ರಗಳು ಮುಖ್ಯ” ಎಂದಿದ್ದಾರೆ ನಟಿ ವೈಷ್ಣವಿ.

Leave a Reply

Your email address will not be published.

Social Media Auto Publish Powered By : XYZScripts.com