ಈ ಬಾರಿ Modi, Rahul ಹಣೆಬರಹ ನಿರ್ಧರಿಸುವವರು ಮೊದಲ ಬಾರಿ ಮತ ಚಲಾಯಿಸುವವರು…

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುವ ಮತದಾರರು ನಿಜವಾಗಿಯೂ ನಿರ್ಣಾಯಕ ಪಾತ್ರವಹಿಸಲಿದ್ದಾರೆ. 29 ರಾಜ್ಯಗಳ 282 ಕ್ಷೇತ್ರಗಳಲ್ಲಿ ಮೊದಲ ಬಾರಿಯ ಮತದಾರರ ಸಂಖ್ಯೆ 2014ರಲ್ಲಿ ಆ ಕ್ಷೇತ್ರಗಳ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರ ಅರ್ಥ, ಈ ಬಾರಿ ಹೊಸ ಮತದಾರರು ಗೆಲುವಿನ ಅಭ್ಯರ್ಥಿಗಳನ್ನೇ ನಿರ್ಧರಿಸಲಿದ್ದಾರೆ.


ಚುನಾವಣಾ ಆಯೋಗದ ಅಂಕಿಸಂಖ್ಯೆಯನ್ನು ಆಧರಿಸಿ ಇಂಡಿಯನ್ ಎಕ್ಸ್ ಪ್ರೆಸ್ ಈ ವಿಶ್ಲೇಷಣೆಯನ್ನು ನಡೆಸಿದೆ.
1997ರಿಂದ 2001ರ ನಡುವೆ ಜನಿಸಿದ ಮತದಾರರು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸುವ ಅರ್ಹತೆ ಹೊಂದಿರಲಿಲ್ಲ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸರಾಸರಿ 1.49 ಲಕ್ಷ ಮೊದಲ ಮತದಾರರು ಇರಲಿದ್ದಾರೆ. ಈ ಸಂಖ್ಯೆಯು 2014ರ ಚುನಾವಣೆಯಲ್ಲಿನ 282 ಕ್ಷೇತ್ರಗಳ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿದೆ.

ಈ 282 ಲೋಕಸಭಾ ಕ್ಷೇತ್ರಗಳ ಪೈಕಿ 217 ಕ್ಷೇತ್ರಗಳು ಪ್ರಮುಖ ರಾಜ್ಯಗಳಲ್ಲಿವೆ — ಪಶ್ಚಿಮ ಬಂಗಾಳ (32 ಕ್ಷೇತ್ರಗಳು), ಬಿಹಾರ (29), ಉತ್ತರಪ್ರದೇಶ (24), ಕರ್ನಾಟಕ (20), ತಮಿಳುನಾಡು (20), ರಾಜಸ್ಥಾನ (17), ಕೇರಳ (17), ಜಾರ್ಖಂಡ್ (13), ಆಂಧ್ರ ಪ್ರದೇಶ (12), ಮಹಾರಾಷ್ಟ್ರ (12), ಮಧ್ಯಪ್ರದೇಶ (11) ಮತ್ತು ಅಸ್ಸಾಂ (10) .

ಲೋಕಸಭಾ ಚುನಾವಣೆಯಲ್ಲಿ ಗಣನೀಯ ಪಾತ್ರವಹಿಸುವ, ಅತ್ಯಧಿಕ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಹೊಸ ಅರ್ಹ ಮತದಾರರ ಸರಾಸರಿ ಸಂಖ್ಯೆಯು (1.1.5 ಲಕ್ಷಕ್ಕಿಂತ ಹೆಚ್ಚು) 2014ರ ಲೋಕಸಭಾ ಕ್ಷೇತ್ರಗಳ ಸರಾಸರಿ ಗೆಲುವಿನ ಅಂತರಕ್ಕಿಂತ (1.86 ಲಕ್ಷ) ತುಸು ಕಡಿಮೆಯಿದೆ.

ಈ ಬಾರಿ ದೇಶಾದ್ಯಂತ ಒಟ್ಟಾರೆ 8.1 ಕೋಟಿ ಹೊಸ ಮತದಾರರು ಸೇರ್ಪಡೆಯಾಗುವ ನಿರೀಕ್ಷೆಯಿದೆ. ಸರ್ಕಾರದ ಬಹುಮತದ ನಿರ್ಧರಿಸುವಲ್ಲಿ ಇವರ ಪಾತ್ರ ನಿರ್ಣಾಯಕವಾಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com