Cricket : ದ್ರಾವಿಡ್‌ರನ್ನು ಹಾಡಿ ಹೊಗಳಿದ KL ರಾಹುಲ್ -ಇತನಿಗೆ ‘ಗೋಡೆ’ನೆ ರಾಹುಲ್ ಶ್ರೀರಕ್ಷೆ

ಕೆಎಲ್ ರಾಹುಲ್‌ಗೆ ‘ಗೋಡೆ’ ರಾಹುಲ್ ಶ್ರೀರಕ್ಷೆ

ದ್ರಾವಿಡ್‌ರನ್ನು ಹಾಡಿ ಹೊಗಳಿದ ಯುವ ರಾಹುಲ್
ರಾಹುಲ್ ದ್ರಾವಿಡ್‌ ಭಾರತೀಯ ಕ್ರಿಕೆಟ್‌ನ ದಂತಕಥೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆಟದ ಸಮಯ ಮುಗಿದ ಬಳಿಕ ಕಾಮೆಂಟರಿ ಬಾಕ್ಸಿನಲ್ಲಿಯೋ, ಬಿಸಿಸಿಐ ಕಚೇರಿಯಲ್ಲಿಯೋ ಕಾಲ ಕಳೆಯುವುದು ಬಿಟ್ಟು ದ್ರಾವಿಡ್ ಹೊಸ ತಲೆಮಾರಿನ ಯುವ ಆಟಗಾರರನ್ನು ಅಣಿ ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಎರಡು ತಿಂಗಳ ಹಿಂದೆ ಆಸ್ಟ್ರೇಲಿಯಾ ಪ್ರವಾಸದ ಸಮದರ್ಭ ಆರಂಭಿಕ ಕೆಎಲ್ ಆಟದಲ್ಲಿ ಲಯ ಕಳೆದುಕೊಂಡು ರನ್‌ ಗಳಿಕೆಗೆ ತಿಣುಕುತ್ತಿದ್ದಾಗ ಎಲ್ಲರೂ ಆವರನ್ನು ಜರೆದಿದ್ದರು.

ಆದರೆ ದ್ರಾವಿಡ್ ಮಾತ್ರ ಕೆಎಲ್ ಆಟದಲ್ಲಿ ಕೆಲವೊಂದು ಸೂಕ್ಷ್ಮ ಬದಲಾವಣೆ ಬೇಕಿದೆ. ಇದರ ಹೊರತಾಗಿ ಅವರೊಬ್ಬ ಅದ್ಭುತ ಪ್ರತಿಭೆ ಎಂದಿದ್ದರು.

ರಾಷ್ಟ್ರೀಯ ತಂಡದಿಂದ ಹೊರಬಿದ್ದು ಆತ್ಮವಿಶ್ವಾಸ ಕಳೆದುಕೊಂಡಿದ್ದ ಕೆಎಲ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮತ್ತೆ ತಂಡಕ್ಕೆ ಮರಳಿದ್ದೇ ಅಲ್ಲದೇ ಎರಡು ಟಿ20 ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು.

ಅವರೇ ಹೇಳುವ ಪ್ರಕಾರ ತಮ್ಮಲ್ಲಿ ಈ ಬದಲಾವಣೆಗೆ ಮೂಲ ಕಾರಣ ದ್ರಾವಿಡ್. ತಂಡದಿಮದ ಹೊರಬಿದ್ದಾಗ ಇಂಡಿಯಾ ಎ ತಂಡಕ್ಕೆ ಆಯ್ಕೆ ಮಾಡಿಸಿ ಐದಾರು ಪಂದ್ಯಗಳನ್ನಾಡಲು ಅವಕಾಶ ಮಾಡಿಕೊಟ್ಟರು.

ಹತಾಶನಾಗುವಂಥದ್ದು ಏನೂ ಇಲ್ಲ ಎಂಬುದನ್ನು ನನಗೆ ಮನವರಿಕೆ ಮಾಡಿಕೊಟ್ಟವರು ದ್ರಾವಿಡ್ ಸರ್ ಎಂದು ಖುದ್ದು ಕೆಎಲ್ ಹೇಳಿಕೊಂಡಿದ್ದಾರೆ..

ನನ್ನ ಆಟದಲ್ಲಿ ಏನೂ ನ್ಯೂನ್ಯತೆ ಇಲ್ಲ. ಕೆಲವೊಂದು ಸಣ್ಣಪುಟ್ಟ ಬದಲಾವಣೆಯೊಂದಿಗೆ ಮತ್ತು ದೃಢ ಮನಸ್ಸಿನೊಂದಿಗೆ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬಹುದು ಎಂಬ ವಿಶ್ವಾಸವನ್ನು ನನ್ನಲ್ಲಿ ತುಂಬಿದವರು ದ್ರಾವಿಡ್ ಅವರೇ ಎಂದು ಕೆಎಲ್ ಹೇಳಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com