ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಉರಿ ದಿ ಸರ್ಜಿಕಲ್ ಸ್ಟ್ರೈಕ್’ : ಚಿತ್ರ ವೀಕ್ಷಿಸಿದ ಪೇಜಾವರ ಶ್ರೀ

ಉಗ್ರರ ದಮನಕ್ಕಾಗಿ ಈ ಹಿಂದೆ ಭಾರತೀಯ ಯೋಧರು ಪಾಕಿಸ್ತಾನದ ಗಡಿ ಭಾಗದಲ್ಲಿ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಆಧರಿಸಿ ನಿರ್ಮಾಣಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಉರಿ ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರವನ್ನು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ವೀಕ್ಷಿಸಿದ್ದಾರೆ.

ಗುರುವಾರ ರಾತ್ರಿ ಮಣಿಪಾಲದ ಭಾರತ್ ಮಾಲ್ ನಲ್ಲಿ ಶಿಷ್ಯರೊಂದಿಗೆ ಉರಿ ಚಿತ್ರವನ್ನು ವೀಕ್ಷಿಸಿದ ಪೇಜಾವರ ಶ್ರೀಗಳು, ಕೆಲವು ದೃಶ್ಯಗಳ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀಗಳು, ಈ ಚಿತ್ರ ನೋಡಿದ ಬಳಿಕ ಸೈನಿಕರ ಕುರಿತು ಮತ್ತಷ್ಟು ಅಭಿಮಾನ, ಗೌರವ ಬೆಳೆಯಿತು. ಯೋಧರಷ್ಟು ಶ್ರಮ ಪಡುವವರು ಬೇರೆ ಯಾರೂ ಇಲ್ಲ ಎಂಬುದು ತಮ್ಮ ಅನುಭವಕ್ಕೆ ಬಂದಿತು ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com