ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಪ್ರೆಗ್ನೆಂಟಂತೆ : ಸೋಷಿಯಲ್‌ ಮೀಡಿಯಾದಲ್ಲಿ ಗುಸುಗುಸು..

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಎಂಬ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಹಬ್ಬಿದೆ. ಕೆಲ ತಿಂಗಳ ಹಿಂದೆ ಮದುವೆಯಾಗಿರುವ ದೀಪಿಕಾ ಪಡುಕೋಣೆ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು.

ದೀಪಿಕಾ, ಸಹಜವಾಗಿ ಕಪ್ಪು ಬಣ್ಣದ ಉಡುಪೊಂದನ್ನು ಧರಿಸಿದ್ದರು. ಇದರಲ್ಲಿ ಅವರ ಹೊಟ್ಟೆ ಸ್ವಲ್ಪ ಉಬ್ಬಿದಂತೆ ಕಾಣುತ್ತಿತ್ತು. ಇದರ ವಿಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ. ಸಹಜವಾಗಿ ಪ್ರೆಗ್ನೆನ್ಸಿ ಬಗ್ಗೆ ಮಾತುಗಳು ಕೇಳಿ ಬರುತ್ತದೆ. ಅಭಿಮಾನಿಗಳ ಗುಸುಗುಸು ಆರಂಭವಾಗುತ್ತದೆ.

ಇತ್ತೀಚಿಗೆ ಪ್ರಶಸ್ತಿ ಪ್ರಧಾನ ಸಮಾರಂಭವೊಂದಕ್ಕೆ ದೀಪಿಕಾ ಹಾಗೂ ರಣವೀರ್ ಆಗಮಿಸಿದ್ದರು. ಕಪ್ಪು ಬಣ್ಣದ ಆಕರ್ಷಣೀಯವಾದ ದಿರಿಸನ್ನು ಧರಿಸಿದ್ದರು.

ಆದರೆ ಈ ಬಗ್ಗೆ ದೀಪಿಕಾ ಅಥವಾ ಅವರ ಕುಟುಂಬದವರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸದ್ಯಕ್ಕೆ ಅವರು ತಮ್ಮ ಮುಂಬರುವ ಛಪಕ್‌ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸದಲ್ಲಿ ಬಿಝಿಯಾಗಿದ್ದಾರೆ.

ದೀಪಿಕಾ ಅವರ ಮುದ್ದು ಗಂಡ ರಣ್‌ವೀರ್ ದೀಪಿಕಾಗೆ ಸಖತ್ ಅಂಟಿಕೊಂಡಿದ್ದಾರೆ. ಎಲ್ಲವನ್ನೂ ದೀಪಿಕಾ ಕೇಳಿಯೇ ಮಾಡುತ್ತಾರೆ ಎಂಬ ಮಾತುಗಳು ಶುರುವಾಗಿದೆ. ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ರಣ್‌ವೀರ್ ನಾಯಕತ್ವದ ‘ಗಲ್ಲಿ ಬಾಯ್’ ಚಿತ್ರವನ್ನು ದೀಪಿಕಾ ಹಾಗೂ ರಣ್‌ವೀರ್ ದಂಪತಿಗಳು ‘ಪ್ರೇಮಿಗಳ ಸ್ಪೆಷಲ್ ದಿನ’ದಂದು ನೋಡಿದ್ದಾರೆ. ಇವರಿಬ್ಬರ ಸಿನಿಮಾ ಪ್ರೀತಿ ಕಂಡು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com