ಟಿ-20 ಕ್ರಿಕೆಟ್ ಟೂರ್ನಿ : ಮನ್ ಪೃಥ್ವಿ ಶಾ, ಸೈಯದ್ ಮುಷ್ತಾಕ್ ಅಲಿ ಭರ್ಜರಿ ಪ್ರದರ್ಶನ

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಮುಂಬೈ ಬ್ಯಾಟ್ಸ್ ಮನ್ ಪೃಥ್ವಿ ಶಾ, ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು ಮುಂಬೈ ಗೆಲುವಿನಲ್ಲಿ ಮಿಂಚಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಗೋವಾ 20 ಓವರ್ ಗಳಲ್ಲಿ 4 ವಿಕೆಟ್ ಗೆ 140 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ತಂಡ 18.2 ಓವರ್ ಗಳಲ್ಲಿ 4 ವಿಕೆಟ್ ಗೆ 141 ರನ್ ಕಲೆ ಹಾಕಿ ಗೆಲುವು ದಾಖಲಿಸಿತು.

ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ಪೃಥ್ವಿ ಶಾ, ಈಗ ಚೇತರಿಸಿಕೊಂಡಿದ್ದಾರೆ. ಗಾಯದಿಂದ ಗುಣಮುಖರಾದ ಮೇಲೆ ಇದೇ ಮೊದಲ ಬಾರಿಗೆ ಅಂಗಳ ಪ್ರವೇಶಿಸಿದ ಪೃಥ್ವಿ ತಮ್ಮ ನೈಜ ಆಟ ಆಡಿದರು. ಗೋವಾ ಬೌಲರ್ ಗಳ ವಿರುದ್ಧ ರನ್ ಗುಡ್ಡೆ ಹಾಕಿದ ಪೃಥ್ವಿ 47 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ನೆರವಿನಿಂದ 71 ರನ್ ಬಾರಿಸಿ ಅಬ್ಬರಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com