ಇಂಗ್ಲೆಂಡ್ ವಿರುದ್ಧ ಭಾರತ ಮಹಿಳಾ ತಂಡವನ್ನು ಮುನ್ನಡೆಸಲಿರುವ ಸ್ಮೃತಿ ಮಂದಾನಾ..

ಭರವಸೆಯ ಆಟಗಾರ್ತಿ ಸ್ಮೃತಿ ಮಂದಾನಾ ಇಂಗ್ಲೆಂಡ್ ವಿರುದ್ಧ ಗುವಾಹಟಿಯಲ್ಲಿ ನಡೆಯಲಿರುವ ಮೂರು ಟಿ-20 ಪಂದ್ಯಗಳಲ್ಲಿ ಭಾರತ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತದ ಟಿ-20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಕಾರಣದಿಂದ, ಸ್ಮೃತಿ ಅವರಿಗೆ ಪಟ್ಟ ಲಭಿಸಿದೆ.

ಭಾರತ ತಂಡ ಮಿಥಾಲಿ ರಾಜ್ ಅವರ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ ಆಡುತ್ತಿದ್ದು, ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿದೆ. ಚುಟುಕು ಪಂದ್ಯ ಮಾರ್ಚ್ 4, 7, 9 ರಂದು ಮೂರು ಟಿ-20 ಪಂದ್ಯಗಳನ್ನು ಭಾರತ ಆಡಲಿದೆ.

ತಂಡ: ಸ್ಮೃತಿ ಮಂದಾನಾ (ನಾಯಕಿ), ಮಿಥಾಲಿ ರಾಜ್, ಜೇಮಿಮಾ ರೊಡ್ರಿಗಸ್, ತಾನಿಯಾ ಭಾಟಿಯಾ, ಭಾರತಿ, ಅನುಜಾ ಪಾಟೀಲ್, ಶಿಖಾ ಪಾಂಡೆ, ಕೋಮಲ್, ಅರುಂಧತಿ ರೆಡ್ಡಿ, ಪೂನಮ್ ಯಾದವ್, ಏಕ್ತಾ ಬಿಷ್ಟ್, ರಾಧಾ ಯಾದವ್, ವೇದಾ ಕೃಷ್ಣಮೂರ್ತಿ, ಹರ್ಲಿನ್.

Leave a Reply

Your email address will not be published.