ಐ-ಲೀಗ್ ಫುಟ್ಬಾಲ್ ಟೂರ್ನಿ : ಐಜ್ವಾಲ್ ವಿರುದ್ಧ ಈಸ್ಟ್ ಬೆಂಗಾಲ್ ತಂಡ

ಐ-ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಐಜ್ವಾಲ್ ವಿರುದ್ಧ ಈಸ್ಟ್ ಬೆಂಗಾಲ್ ತಂಡ ಅಂಕವನ್ನು ಹಂಚಿಕೊಳ್ಳುವಲ್ಲಿ ಸಫಲವಾಗಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಐಜ್ವಾಲ್ ಮೊದಲಾವಧಿಯ 23ನೇ ನಿಮಿಷದಲ್ಲಿ ಗೋಲು ದಾಖಲಿಸಿತು. ಸಹ ಆಟಗಾರ ನೀಡಿದ ಉತ್ತಮ ಪಾಸ್ ಪಡೆದ ಲಿಯೋನ್ಸ್‍ ಅವರು ಎದುರಾಳಿ ಗೋಲ್ ಕೀಪರ್ ಅವರನ್ನು ವಂಚಿಸುವಲ್ಲಿ ಸಫಲರಾದರು. ಪರಿಣಾಮ ಐಜ್ವಾಲ್ ತಂಡ 1-0 ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಈ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ತಂಡ ಸಫಲವಾಯಿತು.

ಎರಡನೇ ಅವಧಿಯಲ್ಲಿ ಈಸ್ಟ್‍ ಬೆಂಗಾಲ್ ತಂಡ 65ನೇ ನಿಮಿಷದಲ್ಲಿ ಸಿಕ್ಕ ಅವಕಾಶ ಬಳಸಿಕೊಂಡಿತು. ಪರಿಣಾಮ ಪಂದ್ಯ ಡ್ರಾದತ್ತ ಸಾಗಿತು. ಕೊನೆಯ ಕ್ಷಣದವರೆಗೂ ಉಭಯ ತಂಡಗಳು ಗೋಲು ಬಾರಿಸುವ ಯೋಜನೆ ಕೈ ಕೊಟ್ಟಿತು.

ಈಸ್ಟ್‍ ಬೆಂಗಾಲ್ ತಂಡ ಆಡಿದ 17 ಪಂದ್ಯಗಳಿಂದ 33 ಅಂಕ ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಚೆನ್ನೈ ಸಿಟಿ ಎಫ್.ಸಿ 40 ಅಂಕಗಳೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡಿದೆ.

Leave a Reply

Your email address will not be published.

Social Media Auto Publish Powered By : XYZScripts.com