ಜೈಶ್‌ ಉಗ್ರ ಪುಲ್ವಾಮಾ ಬಾಂಬ್‌ ದಾಳಿಗೆ ಬಳಿಸಿದ್ದ ಕೆಂಪು ಇಕೋ ಕಾರ್ ಸಿಸಿಟಿವಿಯಲ್ಲಿ ಸೆರೆ

ಕನಿಷ್ಠ 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಆತ್ಮಾಹುತಿ ಬಾಂಬ್‌ ದಾಳಿಗೆ ಜೈಶ್‌ ಉಗ್ರನು ಬಳಸಿದ್ದ ಕೆಂಪು ಇಕೋ ಕಾರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಿಸಿಟಿವಿಯಲ್ಲಿ ದಾಖಲಾಗಿರುವ ಚಿತ್ರಿಕೆಯಲ್ಲಿ ಪತ್ತೆ ಹಚ್ಚಿದೆ.

ಸ್ಫೋಟಕ ತುಂಬಿದ್ದ ಈ ಕೆಂಪು ಇಕೋ ಕಾರನ್ನು ಉಗ್ರ ಆದಿಲ್‌ ಅಹ್ಮದ್‌ ದಾರ್‌ ಚಲಾಯಿಸಿಕೊಂಡು ಬರುತ್ತಿರುವುದು ಸಿಸಿಟಿವಿ ಚಿತ್ರಿಕೆಯಲ್ಲಿ ಕಂಡು ಬಂದಿದೆ.

ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಈ ಕೆಂಪು ಕಾರನ್ನು ಉಗ್ರ ಆದಿಲ್‌ ಢಿಕ್ಕಿ ಹೊಡೆಸುವ ಸ್ವಲ್ಪ ಹೊತ್ತಿಗೆ ಮೊದಲಿನ ದೃಶ್ಯಾವಳಿ ಈ ಸಿಸಿಟಿವಿ ವಿಡಿಯೋ ಚಿತ್ರಿಕೆಯಲ್ಲಿ ದಾಖಲಾಗಿದೆ.

ಈ ಚಿತ್ರಿಕೆಯ ಆಧಾರದಲ್ಲಿ ಸ್ಫೋಟಕ್ಕೆ ಬಳಸಲಾಗಿದ್ದ ಈ ಕೆಂಪು ಕಾರಿನ ಮಾಲಕ ಯಾರೆಂಬುದನ್ನು ಎನ್‌ಐಎ ಪತ್ತೆ ಹಚ್ಚಿದೆ. ಆತ್ಮಾಹುತಿ ದಾಳಿ ನಡೆದ ದಿನದಿಂದಲೇ ಆತನು ನಾಪತ್ತೆಯಾಗಿರುವುದು ಕೂಡ ಈಗ ಗೊತ್ತಾಗಿದೆ.

2010-11ರ ಮಾಡೆಲ್‌ನ ಈ ಕಾರನ್ನು ರೀ-ಪೇಂಟ್‌ ಮಾಡಲಾಗಿದೆ. ಆತ್ಮಾಹುತಿ ದಾಳಿ ನಡೆದ ತಾಣದಲ್ಲಿ ಈ ಕಾರಿನ ಶಾಕರ್‌ಗಳು ಪತ್ತೆಯಾಗಿವೆ. ಅವುಗಳ ಆಧಾರದಲ್ಲಿ ಕಾರಿನ ಮಾಡೆಲ್‌ ದೃಡಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

 

Leave a Reply

Your email address will not be published.

Social Media Auto Publish Powered By : XYZScripts.com