ರಸ್ತೆ ಬದಿ ನಿಂತಿದ್ದ ಎರಡು ಕಾರ್ ಗೆ ಶಾಸಕ ಸಿಟಿ ರವಿ ಇದ್ದ ಕಾರ್ ಡಿಕ್ಕಿ : ಇಬ್ಬರು ಸಾವು

ಮಂಗಳವಾರ ಬೆಳಗ್ಗಿನ ಜಾವ, ಕೊಲ್ಲೂರು ಪ್ರವಾಸಕ್ಕೆಂದು ತೆರಳಿದ್ದ 12 ಸ್ನೇಹಿತರಿದ್ದ ಎರಡು ಕಾರನ್ನು ತುಮಕೂರಿನ ಕುಣಿಗಲ್ ಬಳಿಯ ಊರ್ಕೇನಹಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಕಾರಿನಲ್ಲಿದ್ದ ಯುವಕರು ಮೂತ್ರ ವಿಸರ್ಜನೆಗೆಂದು ರಸ್ತೆ ಬದಿ ನಿಂತಿದ್ದ ಸಮಯದಲ್ಲಿ ವೇಗವಾಗಿ ಬಂದ ಕಾರೊಂದು ಯುವಕರ ಮೇಲೆ ಹರಿದ ಪರಿಣಾಮ ಶಶಿಕುಮಾರ್ , ಸುನಿಲ್ ಗೌಡ ಎಂಬ ಯುವಕರು ಮೃತರಾಗಿದ್ದರೆ, ಓರ್ವ ಗಂಭೀರವಾಗಿ ಗಾಯಗೊಂಡರು. ಡಿಕ್ಕಿ ಹೊಡೆದ ಕಾರಿನಲ್ಲಿ ಬಿಜೆಪಿ ಶಾಸಕ ಸಿಟಿ ರವಿ ಅವರೂ ಇದ್ದರು.

ತುಮಕೂರಿನ ಬಳಿ ಬಿಜೆಪಿ ಶಾಸಕ ಸಿಟಿ ರವಿ ಅವರಿದ್ದ ಕಾರು ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಶಾಸಕ ಸಿಟಿ ರವಿ ಅವರೇ ವಿಡಿಯೋ ಮುಖೇನ ಪ್ರತಿಕ್ರಿಯೆ ನೀಡಿದ್ದಾರೆ. ಅಪಘಾತ ಸಂಭವಿಸುವ ಸಂದರ್ಭದಲ್ಲಿ ಶಾಸಕ ಸಿಟಿ ರವಿ ಅವರು ಚೆನ್ನೈಗೆ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ ಡ್ರೈವರ್ ಆಕಾಶ್ ಮತ್ತು ಗನ್ ಮ್ಯಾನ್ ರಾಜಾ ನಾಯಕ್ ಸೇರಿ ಮೂವರಿದ್ದರು.

ದೂರಲ್ಲಿ ಸಿಟಿ ರವಿ ಅವರ ಹೆಸರು ನೊಂದಾಯಿಸಲಾಗಿಲ್ಲ ಅನ್ನೋದು ಸಾಕಷ್ಟು ಅನುಮಾನ ಸೃಷ್ಠಿಯಾಗಿದ್ದು ದೂರುದಾರರನ್ನೇ ಹೈಜಾಕ್ ಮಾಡಿದ್ರಾ..? ಅನ್ನೋ ಅನುಮಾನ ಸೃಷ್ಠಿಯಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com