‘ಫೆ.೨೨ ರಿಂದ ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ’ – BSY ಸುದ್ದಿಗೋಷ್ಠಿ

ಲೋಕಸಭೆ ಚುನಾವಣೆಗೆ ಸಾಕಷ್ಟು ಸಕಲ ಸಿದ್ಧತೆಗಳು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿವೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ ‘ನನ್ನ ಪರಿವಾರ ಬಿಜೆಪಿ ಪರಿವಾರ ಅಭಿಯಾನ ದೇಶವ್ಯಾಪಿಯಾಗಿದೆ. 5 ಕೋಟಿ ಕಾರ್ಯಕರ್ತರು ಬಿಜೆಪಿ ಧ್ವಜ ಹಾರಿಸುತ್ತಾರೆ. ಧ್ವಜ ಹಾರಿಸದ ಬಳಿಕ ಸೆಲ್ಫಿ ಪಿಕ್ ಮಾಡಿ, ಆ ಸೆಲ್ಪಿಯನ್ನು ಫೇಸ್ ಬುಕ್ ಟ್ವೀಟ್ ಮಾಡಲಿದ್ದಾರೆ. ಪ್ರತಿ ಭೂತ್ ಮಟ್ಟದಲ್ಲಿ ಪ್ರತಿದಿನ 25 ಮನಗಳಿಗೆ ಭೇಟಿ ನೀಡಲಾಗುತ್ತಿದೆ.
ಜೊತೆಗೆ ಸಂಪರ್ಕದ ಮನೆಗಳಲ್ಲಿ ಊಟ ಉಪಚಾರ. ರಾಜ್ಯದ 75 ಲಕ್ಷ ಮನೆಗಳ ಭೇಟಿ ಮಾಡಲಾಗುವುದು. ಫೇಬ್ರವರಿ 26 ಕಮಲ ಸಂಕಲ್ಪ. ದೀಪೋತ್ಸವ ಕಾರ್ಯಕ್ರಮ ನಡೆಸಲಾಗುತ್ತದೆ. ಸಂಜೆ ಏಳು ಗಂಟೆಗೆ ದೇಶದಾದ್ಯಂತ ನಡೆಯತ್ತೆ. ರಂಗೋಲಿ ಹಾಕಿ ಕಾರ್ಯಕ್ರಮ ನಡೆಸಲಾಗುತ್ತದೆ. ಈ ವೇಳೆ ಎಂಟು ಲಕ್ಷ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಶಾಸಕರು ಸಂಸದರು ಭಾಗಿಯಾಗಲಿದ್ದಾರೆ.
ಫೇಬ್ರವರಿ ೨೮ ರಂದು ಮೋದಿ ಭೂತ್ ಕಾರ್ಯಕರ್ತರ ಜೊತೆ ಸಂವಾದ ನಡೆಸಿ, ಎಲ್ಲಾ 224 ಕ್ಷೇತ್ರಗಳಲ್ಲಿ ಒಂದೊಂದು ಸಾವಿರ ಕಾರ್ಯಕರ್ತರ ಸಮಾವೇಶ ಮಾಡಲಾಗುತ್ತದೆ. ವಿಜಯ ಸಂಕಲ್ಪ ದೇಶದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಳ್ಳಿ ಭಾಗದಲ್ಲಿ 150 km,ಪಟ್ಟಣಗಳಲ್ಲಿ 60ಕಿಮಿ ಮೋಟಾರ್ ಬೈಕ್ ರ್ಯಾಲಿ ಮಾರ್ಚ್ 2 ರಂದು ನಡೆಸಲಾಗುತ್ತದೆ. ಬೈಕ್ ಗೆ ಪಕ್ಷದ ಧ್ವಜ ಕಟ್ಟಿ ಪ್ರಚಾರ ಮಾಡಲಾಗುತ್ತದೆ. ಬೀದರ್ ನಿಂದ ಆರಂಭವಾಗುವ ಸಂಕಲ್ಪ ಯಾತ್ರೆಗೆ ಫೆ.೨೨ ರಿಂದ ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದು, ಕೇಂದ್ರ ಕೃಷಿ ಸಹಾಯಕ ಸಚಿವ ಭಾಗಿಯಾಗ್ತಾರೆ.
ಮಾರ್ಚ್ ೧೯ರೊಳಗೆ ರಾಜ್ಯದ ಎಲ್ಲ ೨೮ ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಸುತ್ತಿನ ಪ್ರಚಾರ ನಡೆಸಲಾಗುತ್ತದೆ. ಈಗಾಗಲೇ ಆರಂಭವಾಗಿರುವ ನನ್ನ ಪರಿವಾರ, ಬಿಜೆಪಿ ಪರಿವಾರ ಮಾರ್ಚ್ ೨ರ ತನಕ  ಅಭಿಯಾನ ನಡೆಯಲಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com