ಸರಿಗಮಪ ಸೀಸನ್  15 : ಮಹಾಸಂಚಿಕೆಯಲ್ಲಿ ಗ್ರಾಂಡ್ ಫೈನಲಿಸ್ಟ್ ಗಳು ಯಾರಾಗಬಹುದು?

ವೀಕೆಂಡ್ ಬಂದರೆ ಸಾಕು ಮನೆ ಮಂದಿಯೆಲ್ಲಾ ಟಿವಿ ಮುಂದೆ ಕೂತು ಕಾಯುವ ಕನ್ನಡಿಗರ ನೆಚ್ಚಿನ ಸಂಗೀತ ಕಾರ್ಯಕ್ರಮ ಸರಿಗಮಪ ಸೀಸನ್ 15. ಮೊನ್ನೆ ಮೊನ್ನೆಯಷ್ಟೇ ಶುರುವಾದಂತಿರುವ ನಮ್ಮ ನೆಚ್ಚಿನ  ಸರಿಗಮಪ ಸೀಸನ್  15 ಸೆಮಿ ಫೈನಲ್ ಹಂತ ತಲುಪಿದೆ.. ಈ ಸೀಸನ್ನಿನ ಗ್ರಾಂಡ್ ಫಿನಾಲೆ ಮೆಟ್ಟಿಲೇರುವ ಆ ಗ್ರಾಂಡ್ ಫೈನಲಿಸ್ಟ್ ಗಳು ಯಾರೆಂದು ಈ ವಾರದ ಮಹಾಸಂಚಿಕೆಯ ಕೊನೆಯಲ್ಲಿ ನಿರ್ಧಾರವಾಗಲಿದೆ..

ಇಷ್ಟು ದಿನ ಕಲಿತ ತಮ್ಮ ವಿದ್ಯೆ, ವಿದ್ವತ್ತು ಎಲ್ಲವನ್ನೂ ಒಟ್ಟುಗೂಡಿಸಿ ಹನ್ನೆರಡೂ ಸ್ಪರ್ಧಿಗಳು ಈ ವಾರದ ಸೆಮಿ ಫೈನಲ್ಸ್ ನಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.. ಈ ವಾರದ ಸಂಚಿಕೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ಪೈಪೋಟಿಗಿಳಿದು ಸ್ಪರ್ಧೆ ನೀಡಿದ್ದು, ಇವರ ಹಾಡುಗಾರಿಕೆ ಗ್ರಾಂಡ್ ಫಿನಾಲೆ ಮಟ್ಟದ ಪರ್ಫಾರ್ಮೆನ್ಸ್ ಎಂದು ಖುದ್ದು ಜಡ್ಜ್ ಸ್ ಹೇಳಿದ್ದು ವೈಶಿಷ್ಟ್ಯ..

ಇನ್ನೂ ಸೆಮಿ ಫೈನಲ್ಸ್ ನ ವಿಶೇಷತೆ ಎಂದರೆ ಕನ್ನಡ ಚಂದವನದ ಅತ್ಯದ್ಭುತ ಮತ್ತು ಚಾಲೆಂಜಿಂಗ್ ಹಾಡುಗಳನ್ನ ಸ್ಪರ್ಧಿಗಳು ಆಯ್ಕೆ ಮಾಡಿಕೊಂಡು ಹಾಡಲಿದ್ದಾರೆ. ಇನ್ನೂ ಕನ್ನಡಿಗರ ಮನೆ ಮಾತಾಗಿರುವ ನಮ್ಮ ಹನುಮಂತನಿಗೆ ಸೆಮಿ ಫೈನಲ್ಸ್ ವೇದಿಕೆಯಲ್ಲಿ ಮೊದಲ ಭಾರಿಗೆ ವೇದಿಕೆಗೆ ಭೇಟಿ ನೀಡಿದ್ದು ದೊಡ್ಡ ಸರ್ಪ್ರೈಸ್.. ಆ ಕ್ಷಣದಲ್ಲಿ ಜಡ್ಜ್ ಸ್, ಜ್ಯೂರಿ ಮೆಂಬರ್ಸ್ ವೇದಿಕೆಯಲ್ಲಿದ್ದ ಪ್ರತಿಯೊಬ್ಬರೂ ತಂದೆಯ ಪ್ರೀತಿಯನ್ನು ಕಂಡು ಭಾವುಕರಾದರು..

ಜೊತೆಗೆ ಈ ಭಾರಿ ಗ್ರಾಂಡ್ ಫಿನಾಲೆ ತಲುಪುವ ಫೈನಲಿಸ್ಟ್ ಗಳು ಎಷ್ಟು ಮಂದಿ, ಅವರು ಯಾರು ಎಂಬ ಕುತೂಹಲ ಎಲ್ಲ ವೀಕ್ಷಕರನ್ನು ಕಾಡುತ್ತಿದೆ.. ಹಾಗಾಗಿ ಅಭೂತಪೂರ್ವ ಮನರಂಜನೆಗೆ, ಹಾಡಿನ ಪೈಪೋಟಿಗೆ, ಜೊತೆಗೆ ವಿಶೇಷವಾಗಿ ಎಲಿಮಿನೇಶನ್ ಹಂತವನ್ನೇ ಮುಟ್ಟದೆ ಮಹಾಗುರುಗಳಿಂದ ಪ್ಲಾಟಿನಂ ಟಿಕೆಟ್ ಪಡೆದು ಮೂರು ಜನ ನೇರವಾಗಿ ಗ್ರಾಂಡ್ ಫಿನಾಲೆ ತಲುಪಿದ್ದು ಆ ಮೂರು ಜನ ಯಾರೆಂದು ತಿಳಿಯಲು ಇದೆ ಶನಿವಾರ ರಾತ್ರಿ 8 ರಿಂದ 11 ಗಂಟೆಯ ವರೆಗೆ ಪ್ರಸಾರವಾಗುವ ಸರಿಗಮಪ ಸೀಸನ್ 15ರ ಸೆಮಿ ಫೈನಲ್ ಮಹಾಸಂಚಿಕೆಯನ್ನು ತಪ್ಪದೆ ವೀಕ್ಷಿಸಿ..

Leave a Reply

Your email address will not be published.

Social Media Auto Publish Powered By : XYZScripts.com