”’ಪಾಪಿಸ್ತಾನ’ ಮಟ್ಟ ಹಾಕುವುದು ಅವಶ್ಯವಿದೆ”- ಮಾಜಿ ಸಚಿವ ವಿನಯ ಕುಲಕರ್ಣಿ

ಜಮ್ಮುವಿನ ಪುಲ್ವಾಮಾದಲ್ಲಿ ಭಾರತದ ಯೋಧರ ಹತ್ಯೆಗೆ ಕಾರಣರಾದವರನ್ನು ಮಟ್ಟ ಹಾಕುವುದು ಅವಶ್ಯವಿದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಕಾರ್ಗಿಲ್ ಸ್ತೂಪಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನಿನ್ನೆ ಹುತಾತ್ಮರಾದ ಸಿಆರ್‍ಪಿಎಫ್ ಯೋಧರಿಗೆ ಗೌರವ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ದೇಶದ ಗಡಿಭಾಗದಲ್ಲಿ ಉಗ್ರರಿಂದ ನಿರಂತರ ದಾಳಿಗಳು ನಡೆಯುತ್ತಿವೆ.ಈ ಸಂದರ್ಭದಲ್ಲಿ ಭಾರತದ ಯೋಧರು ಸಾವನ್ನಪ್ಪುತ್ತಿದ್ದಾರೆ.ನಿನ್ನೆಯ ದಾಳಿ ವೇಳೆ 44ಯೋಧರು ಹುತಾತ್ಮರಾಗಿದ್ದು ದುಃಖದ ಸಂಗತಿ ಮತ್ತು ಖಂಡನಾರ್ಹ ವಾಗಿದೆ. ಈ ಸಂದರ್ಭದಲ್ಲಿ ವೀರ ಮರಣ ಹೊಂದಿದ ನಮ್ಮ ಯೋಧರಿಗೆ ಗೌರವ ನಮನ ಸಲ್ಲಿಸುವುದು ಮಾತ್ರವಲ್ಲದೇ ಅವರ ಕುಟುಂಬದವರ ಜೊತೆ ನಿಲ್ಲಬೇಕಿದೆ ಎಂದು ಕುಲಕರ್ಣಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ, ಪಾಲಿಕೆ ಸದಸ್ಯ ಸುಭಾಸ ಶಿಂಧೆ, ಮುಖಂಡರಾದ ಮನೋಜಕುಮಾರ ಕರ್ಜಗಿ, ಅಜ್ಜಪ್ಪ ಗುಲಾಲದವರ, ಪ್ರದೀಪಗೌಡ ಪಾಟೀಲ, ಪ್ರಶಾಂತ ಕೇಕರೆ, ಶಾಂತಮ್ಮ ಗುಜ್ಜಳ, ಕೆಂಪೇಗೌಡ ಪಾಟೀಲ, ನವೀನ ಕದಂ, ಬಸೀರ ಹಾಲಭಾವಿ, ನಜೀರಅಹ್ಮದ ಬಳಬಟ್ಟಿ, ಪ್ರಭು ತಾಂವಶಿ, ಮಹ್ಮದಅಲಿ ಒಡ್ಡೊಡಗಿ, ಪಾಪು ಪವಾರ ಮತ್ತಿತರರು ಇದ್ದರು.

Leave a Reply

Your email address will not be published.

Social Media Auto Publish Powered By : XYZScripts.com