ಅಕುಲ್ ಬಾಲಾಜಿ-ಶ್ರದ್ಧಾ ವಿರುದ್ಧ ದೂರು ಕೊಡಲು ಆದಮ್ ಪಾಶಾ ನಿರ್ಧಾರ

‘ತಕಧಿಮಿತ’ ನಿರೂಪಕ ಅಕುಲ್ ಬಾಲಾಜಿ ಮತ್ತು ನಿರ್ದೇಶಕಿ ಶ್ರದ್ಧಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಆದಮ್ ಪಾಶಾ ಮುಂದಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ‘ತಕಧಿಮಿತ’ ಡ್ಯಾನ್ಸ್ ರಿಯಾಲಿಟಿ ಶೋ ವೇದಿಕೆ ಮೇಲೆ ತಮಗೆ ಅವಮಾನ ಆಗುವ ಹಾಗೆ ಅಕುಲ್ ಬಾಲಾಜಿ ಮಾತನಾಡಿದ್ದಾರೆ. ಹಾಗೂ ನಿರ್ದೇಶಕಿ ಶ್ರದ್ಧಾ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ ಆದಮ್ ಪಾಶಾ.
”ತಕಧಿಮಿತ’ ನಿರ್ದೇಶಕಿ ಶ್ರದ್ಧಾ ನನಗೆ ಧಮ್ಕಿ ಹಾಕುತ್ತಾರೆ. ”ನಿಮಗೆ ಜನರಿಂದ ಅತಿ ಹೆಚ್ಚು ವೋಟ್ಸ್ ಸಿಕ್ಕರೂ, ನಾನು ನಿಮ್ಮನ್ನ ಎಲಿಮಿನೇಟ್ ಮಾಡಬಹುದು” ಅಂತ ಶ್ರದ್ಧಾ ನನಗೆ ಹೇಳಿದ್ದಾರೆ. ಹಾಗಾದ್ರೆ, ಇದು ರಿಯಾಲಿಟಿ ಶೋ ಅಲ್ಲವೇ ಅಲ್ಲ. ಶ್ರದ್ಧಾ ಶೋ ಅಷ್ಟೇ.! ಇಂತಹ ಶೋದಲ್ಲಿ ನಾನು ಯಾಕೆ ಇರಬೇಕು.?” – ಆದಮ್ ಪಾಶಾ.

ಯಾಕೆ ಅವಮಾನ ಮಾಡಬೇಕು.? ”ನನಗೆ ಅಲ್ಲಿ ಮರ್ಯಾದೆ ಸಿಕ್ಕಿಲ್ಲ. ಅದು ಡ್ಯಾನ್ಸ್ ಶೋ. ಹೀಗಾಗಿ, ಅಲ್ಲಿ ಡ್ಯಾನ್ಸ್ ಮಾಡಬೇಕು, ಹೋಗಬೇಕು. ಅದು ಬಿಟ್ಟು ಅವಮಾನ ಮಾಡಿದರೆ.? ನನ್ನನ್ನ ಅಕುಲ್ ಬಾಲಾಜಿ ವೇದಿಕೆ ಮೇಲೆ ಕರೆದು ಸ್ತ್ರೀಲಿಂಗ, ಪುಲ್ಲಿಂಗ ಅಂತೆಲ್ಲಾ ಮಾತನಾಡುತ್ತಾರೆ. ನನಗೆ ಕನ್ನಡ ಅಷ್ಟೊಂದು ಅರ್ಥ ಆಗಲ್ಲ ನಿಜ. ಆದರೆ, ಬೇರೆಯವರು ನನಗೆ ಏನೇನಾಯ್ತು ಅಂತ ವಿವರಿಸಿದ್ದಾರೆ. ಹೀಗಾಗಿ, ನಾನು ಅವರನ್ನ ಸುಮ್ಮನೆ ಬಿಡಲ್ಲ” ಎನ್ನುತ್ತಾರೆ ಆದಮ್ ಪಾಶಾ.

ಜೆಂಡರ್ ಬಗ್ಗೆ ಯಾಕೆ ತಮಾಷೆ ಮಾಡಬೇಕು.? ”ಇವತ್ತು ನನಗೆ ಹೀಗೆ ಹೇಳಿರಬಹುದು. ನಾಳೆ ಇನ್ನೊಬ್ಬರಿಗೆ ಹೇಳುತ್ತಾರೆ. ಅಕುಲ್ ಬಾಲಾಜಿಗೆ ಒಳ್ಳೆ ರೆಪ್ಯುಟೇಶನ್ ಇದೆ. ಆದ್ರೆ, ಈ ತರಹ ಕೆಟ್ಟ ಜೋಕ್ಸ್ ಯಾಕೆ ಮಾಡಬೇಕು.? ನನ್ನ ಜೆಂಡರ್ ಬಗ್ಗೆ ಯಾಕೆ ತಮಾಷೆ ಮಾಡಬೇಕು.?” – ಆದಮ್ ಪಾಶಾ

ಹೀಗಾಗಿ ಮನನೊಂದು ಆದಮ್ ಪಾಶಾ ಅಕುಲ್ ಬಾಲಾಜಿ-ಶ್ರದ್ಧಾ ವಿರುದ್ಧ ದೂರು ಕೊಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com