ಮಂಡ್ಯ: ಲಿಫ್ಟ್ ಅನ್ನೇ ಶೌಚಾಲಯ ಎಂದು ಕಾಲಿಟ್ಟ ಮಹಿಳೆ ಕೆಳಗೆ ಬಿದ್ದು ಸಾವು

ಶೌಚಾಲಯ ಎಂದು ನಿರ್ಮಾಣ ಹಂತದಲ್ಲಿರುವ ಲಿಫ್ಟ್ ಒಳಗೆ ಹೋಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಲಿಫ್ಟ್ ಅನ್ನೇ ಶೌಚಾಲಯ ಎಂದು ಕಾಲಿಟ್ಟ ಮಹಿಳೆ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದೆ.ಶಾರದಮ್ಮ(62) ಮೃತರು, ಅವರು ಪಾಂಡವಪುರದ ಎಣ್ಣೆಹೊಳೆ ಕೊಪ್ಪಲಿನ ನಿವಾಸಿಯಾಗಿದ್ದಾರೆ. ಕಾಮಗಾರಿ ನಡೆಯು ತ್ತಿದ್ದ ಲಿಫ್ಟ್ ರೂಮ್‍ಗೆ ಬಾಗಿಲು ಅಳವಡಿಸದೆ ಇದ್ದುದರಿಂದ ಈ ದುರ್ಘಟನೆ ಸಂಭವಿಸಿದೆ.

ಮೊಮ್ಮಗಳೊಂದಿಗೆ ಡಯಾಲಿಸಿಸ್‍ಗೆ ನೆರವಾಗಲು ಈ ಮಹಿಳೆ ಬಂದಿದ್ದರು ಎನ್ನಲಾಗಿದೆ. ಘಟನೆಯಿಂದಾಗಿ ಕೆಲಕಾಲ ಆಸ್ಪತ್ರೆ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com