‘ಅಮೃತವರ್ಷಿಣಿ’ ರಾಘವಾ-ವರ್ಷ ಮದುವೆ ಮುರಿಯಲು ಪ್ಲಾನ್ ಮಾಡಿದವರಿಗೆ ತಿರುಮಂತ್ರ

‘ಅಮೃತಾ ವರ್ಷಿಣಿ’ ಧಾರವಾಹಿಯಲ್ಲಿ ರಾಘವಾ ಹಾಗೂ ವರ್ಷ ಮದುವೆ ಸಾಕಷ್ಟು ಕುತೂಹಲ ಕೆರಳಿಸಿದೆ. ಇನ್ನೇನು ಅರಿಶಿಣದ ಕಾರ್ಯ ಮುಗಿದ ಬಳಿಕ ಮದ್ವೆ ಆಗೇ ಹೋಗ್ತಾರೆ ಅನ್ನೋ ಹಾಗೇ ಇಲ್ಲ. ಯಾಕಂದ್ರೆ ಇವರಿಬ್ಬರ ಮದ್ವೆ ಅಷ್ಟು ಈಜಿಯಾಗಿ ಆಗುವಂತೆ ಕಾಣುತ್ತಿಲ್ಲ.

ಕಾರಣ ರಾಘವನ ಅತ್ತೆ. ಅತ್ತೆ ವಸು ತನ್ನ ಮಗಳಿಗೆ ರಾಘವನೊಂದಿಗೆ ಮದ್ವೆ ಮಾಡುವ ಕನಸು. ಈ ಕನಸ್ಸನ್ನ ಕೇವಲ ವಸುಂಧರ ಮಾತ್ರ ಕಾಣುತ್ತಿಲ್ಲ. ಬದಲಿಗೆ ವಸು ತಾಯಿ ಮತ್ತು ವಸು ಮಗಳು ಸಾನ್ವಿ ಕೂಡ ಕಾತುರದಿಂದ ಕಾಯ್ತಾಯಿದ್ದಾರೆ.

ಹಾಲು ಜೇನಿನಂತಾ ಮದ್ವೆಗೆ ಹುಳಿ ಹಿಂಡುವಂತ ಕೆಲಸಗಳು ಪದೇ ಪದೇ ನಡೆಯುತ್ತಲೇ ಇವೆ. ಅರಿಶಿಣ ಶಾಸ್ತ್ರದಲ್ಲಿ ಮೈ ಉರಿ, ಬೊಬ್ಬೆ ಬರುವ ಪುಡಿ ಸೇರಿಸಿದ ಅಜ್ಜಿಗೆ ಪಾಠ ಕಲಿಸಲು ಅಮೃತಾ ಭುವಿ ಸೇರಿ ಸಾನ್ವಿಗೆ ಅದೇ ಅರಿಶಿಣವನ್ನು ಮೈಕೈ ಗೆ ಹಚ್ಚುತ್ತಾರೆ.  ಈ ತಿರುಮಂತ್ರಕ್ಕೆ ಅಜ್ಜಿ,ತಾಯಿ ವಸು ಹಾಗೂ ಸಾನ್ವಿ ಏನ್ ಮಾಡ್ತಾರೆ ಅನ್ನೋದೇ ಕುತೂಹಲ.

ರಾಘವಾ ಹಾಗೂ ವರ್ಷ ಮದ್ವೆ ಆಗಲು ಬಿಡ್ತಾರಾ..? ಅಥವಾ ಮದ್ವೆ ಮುರಿಯಲು ಮಾಸ್ಟರ್ ಪ್ಲಾನ್ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

Leave a Reply

Your email address will not be published.