ಇದು ನನ್ನ ಸಾವಿಗಿಂತಲೂ ಕ್ರೂರ : ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್

ರಾಜ್ಯ ಬಜೆಟ್ ಅಧಿವೇಶನದ ವಿಧಾನಸಭಾ ಕಲಾಪ ಆರಂಭವಾಗಿದ್ದು, ಕಲಾಪ ಆರಂಭವಾಗುತ್ತಿದ್ದಂತೆ ಅಪರೇಷನ್ ಕಮಲ ಆಡಿಯೋದಲ್ಲಿ ತಮ್ಮ ಹೆಸರು ಉಲ್ಲೇಖವಾಗಿರುವ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಭಾವುಕರಾದ ಪ್ರಸಂಗ ನಡೆದಿದೆ.

ಕಲಾಪ್ ಆರಂಭ ಆಗುತ್ತಿದ್ದಂತೆ ಆಡಿಯೋ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ ಸ್ಪೀಕರ್ ರಮೇಶ್ ಕುಮಾರ್, ಮಾನ್ಯ ಮುಖ್ಯಮಂತ್ರಿಗಳು ಶುಕ್ರವಾರ ಒಂದು ಪತ್ರವನ್ನ ಬರೆದು ಆಡಿಯೋವನ್ನ ನೀಡಿದ್ದರು. ಆ ವೇಳೆ ನನ್ನ ಬಗ್ಗೆ ಕೆಲವು ಗೌರವಯುತ ಮಾತುಗಳನ್ನಾಡಿದರು. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆಡಿಯೋವನ್ನ ಆಲಿಸಿದ್ದೇನೆ. ಸ್ಪೀಕರ್ ಆದವರು ಸದನದ ಮೌಲ್ಯಗಳ ಪ್ರತೀಕ ಆಗಿರ್ತಾರೆ, ಆದರೆ ನನ್ನ ದೌರ್ಭಾಗ್ಯ ಆ ಆಡಿಯೋದಲ್ಲಿ ನನ್ನ ಹೆಸರು ಉಲ್ಲೇಖ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಡಿಯೋದಲ್ಲಿ ನನಗೆ 50 ಕೋಟಿ ರೂ. ಕೊಡಲಾಗಿದೆ ಎಂದು ಹೇಳಲಾಗಿದೆ. ಶಾಸಕರು ರಾಜೀನಾಮೆ ನೀಡಿದರೇ ತಕ್ಷಣ ಪಡೆಯು ವಂತೆ ಬೇಡಿಕೆ ಇಟ್ಟು 50 ಕೋಟಿ ನೀಡಲಾಗಿದೆ ಎಂದು ಆಡಿಯೋ ದಲ್ಲಿ ಉಲ್ಲೇಖವಾಗಿದೆ. ಇನ್ನೂ ದುಃಖದ ವಿಷಯ. ನಾನು ಈವರೆಗೂ ಬಾಡಿಗೆ ಮನೆಯಲ್ಲಿ ಇದ್ದೇನೆ. ಸರ್ಕರಿ ಬಂಗಲೆಯನ್ನೂ ಕೂಡ ಪಡೆದಿಲ್ಲ. ಜತೆಗೆ ನನ್ನ ಮನೆಯ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತದೆ ಎಂದು ಬೋರ್ಡ್ ಸಹ ಹಾಕಿಸಿಲ್ಲ. ಆದರೂ ನನಗೇಗೆ ಈ ಶಿಕ್ಷೆ. ಆಡಿಯೋದಲ್ಲಿ ನನ್ನ ಹೆಸರು ಉಲ್ಲೇಖಿಸಿರುವುದು. ಅನವಶ್ಯಕವಾಗಿ ನನ್ನ ಚಾರಿತ್ರ್ಯವಧೆ ಮಾಡಿದ್ದೀರಾ. ಈ ವಿಚಾರ ನನ್ನ ಸಾವಿಗಿಂತಲೂ ಕ್ರೂರವಾದದ್ದು, ನನಗೇಕೆ ಈ ಶಿಕ್ಷೆ ಎಂದು ಭಾವುಕರಾದರು.

ಹಾಗೆಯೇ ಆಡಿಯೋದಲ್ಲಿರುವುದು ಯಾರೆಂದು ನನಗೆ ಹೆಚ್ಚಾಗಿ ಗೊತ್ತಿಲ್ಲ. ಹೀಗಾಗಿ ಅವರಧ್ವನಿ ಗೊತ್ತಾಗಿಲ್ಲ. ಆಡಿಯೋದಲ್ಲಿ ದೇಶದ ಪ್ರಧಾನಿ ಹೆಸರನ್ನೂ ಬಳಸಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com