ಅಯೋಧ್ಯೆಯಲ್ಲಿ ಕಮಲ ಏಕೆ ಅರಳಲಿಲ್ಲ : ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ವ್ಯಂಗ್ಯ

‘ದೋಷಯುಕ್ತ ಇಗಿಒ ಬಳಸಲ್ಪಟ್ಟಲ್ಲಿ ಭಾರತೀಯ ಜನತಾ ಪಕ್ಷದ ಕಮಲ, ಲಂಡನ್, ಅಮೆರಿಕದಲ್ಲಿ ಕೂಡ ಅರಳುವುದು ಸಾಧ್ಯವಿದೆ’ ಎಂದು ಶಿವಸೇನೆ ಕಟಕಿಯಾಡಿದೆ.

‘ಭಾರತೀಯ ಜನತಾ ಪಕ್ಷದ ನಾಯಕರಲ್ಲಿ ಅತಿಯಾದ ಆತ್ಮ ವಿಶ್ವಾಸ, ತೀವ್ರವಾಗಿ ಸಾಗುತ್ತಿರುವ ರಫೇಲ್ ವಿವಾದ, ದೋಷಯುಕ್ತ ಇವಿಎಂ ಗಳು, ಬಿಜೆಪಿ ನಾಯಕರ ಲಂಗು ಲಗಾಮಿಲ್ಲದ ಬೇಜವಾಬ್ದಾರಿಯ ಹೇಳಿಕೆಗಳೇ ಮೊದಲಾದ ಹಲವಾರು ವಿಷಯಗಳು ಬಿಜೆಪಿಗೆ ಮುಂಬಯಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಿರುಗುಬಾಣ ವಾಗಲಿದೆ’ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಎಚ್ಚರಿಸಿದರು.

‘ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಸ್ಥಾನಗಳ ಪೈಕಿ 43 ಸ್ಥಾನಗ ಳನ್ನು ಗೆಲ್ಲುವ ಅತಿಯಾದ ಆತ್ಮವಿಶ್ವಾಸ ಬಿಜೆಪಿ ನಾಯಕರಲ್ಲಿದೆ. ಹಾಗಾಗಿ ಅದು ಚುನಾವಣಾ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಹೋರಾಡುವ ಭಂಡತನ ತೋರುತ್ತಿದೆ. ಅದರ ಈ ನಿಲುವು ಪಕ್ಷಕ್ಕೆ ಮುಳುವಾಗಲಿದೆ’ ಎಂದ ಠಾಕ್ರೆ, ‘ಅಯೋಧ್ಯೆಯಲ್ಲಿ ಬಿಜೆಪಿಯ ಕಮಲ ಏಕೆ ಅರಳಲಿಲ್ಲ’ ಎಂದು ವ್ಯಂಗ್ಯದಿಂದ ಪ್ರಶ್ನಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com