ಇಂದಿನ ಕಲಾಪದಲ್ಲೂ ಎಸ್ ಐಟಿ ತನಿಖೆಗೆ ಸಲಹೆ ಬಗ್ಗೆ ಬಿಜೆಪಿ ಗದ್ದಲ

ಐದನೇ ದಿನದ ವಿಧಾನಸಭೆ ಕಲಾಪ ಆರಂಭವಾಗಿದೆ. ನ್ಯಾಯಾಂಗ ತನಿಖೆ ವಿಳಂಬವಾಗುವ ಕಾರಣ ಸ್ಪೀಕರ್ ರಮೇಶ್ ಕುಮಾರ್ ಆಡಿಯೋ ಆಪರೇಷನ್ ಎಸ್ ಐಟಿ ತನಿಖೆ ನಡೆಸುವುದೇ ಸೂಕ್ತ  ಎಂದು ತಿಳಿಸಿದ್ದಾರೆ.

ಇಂದಿನ ಕಲಾಪದಲ್ಲೂ ಎಸ್ ಐಟಿ ತನಿಖೆಗೆ ಸಲಹೆ ನೀಡಿದ ಬಗ್ಗೆ ಬಿಜೆಪಿ ಗದ್ದಲ ನಡೆದಿದೆ. ಇಂದಿನ ಕಲಾಪದಲ್ಲಿ ಆಡಿಯೋ ಗದ್ದಲ ಶುರುವಾಗಿದೆ.  ಎಸ್ ಐಟಿ ತನಿಖೆಯಿಂದ್ ಸತ್ಯಸತ್ಯತೆಗಳು ಬರೋದಿಲ್ಲ.

ಐದನೇ ದಿನದ ವಿಧಾನಸಭೆ ಕಲಾಪದಲ್ಲಿ  ಬಿಜೆಪಿ ಪರ ಮಧುಸ್ವಾಮಿ ವಾದ ಮಾಡಿದರು. ‘ಯಾವುದೇ ತನಿಕೇಯಿಂದ 15 ದಿನದಲ್ಲಿ ಸತ್ಯ ಸಿಗಲ್ಲ. ವಿಧಾನಸಭೆಯಲ್ಲಿ ಆಡಿಯೋ ಚರ್ಚೆ ಇಡೀ ರಾಜ್ಯ ನಿಮ್ಮನ್ನ ಸಂಶಯ ದೃಷ್ಟಿಯಿಂದ ನೋಡಲ್ಲ. ತನಿಖೆ ಮಾಡಲೇಬೇಕು ಅಂದರೆ ಸದನ ಸಮಿತಿ ತನಿಖೆ ಮಾಡಿ. ನಿಮ್ಮ ಗೆಳೆಯನಾಗಿಯೂ ಸದಸದಲ್ಲಿ ವಿನಂತಿ ಮಾಡುತ್ತಿದ್ದೇನೆ.ಈ ಇಶೋನ ಕ್ಲೋಸ್ ಮಾಡಿ, ಯಾವ ಸಾಧನೆ ಆಗೋದಿಲ್ಲ.

ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ. ಎಸ್ ಐಟಿ ಮೇಲೆ ಹಿಂದೆ ಇಲ್ಲದ ನಂಬಿಕೆ ಈಗ ಯಾಕೆ ಬಂತು..? ಎಸ್ ಐಟಿ ತನಿಖೆ ಸರಿ ಅಲ್ಲ. ಸದಸದ ಪ್ರಶ್ನೆಯನ್ನು ಸದನದಲ್ಲೇ ಉಳಿಸಿ ಕೋರ್ಟ್ ವರೆಗೂ ಹೋಗುವುದು ಬೇಡ. ಮರುಪರಿಶೀಲನೆ ಮಾಡಿ, ನಾಲ್ಕು ಗೋಡೆ ಮಧ್ಯ ಚರ್ಚೆ ಮಾಡಿ, ನಿಮ್ಮ ಇಮೇಜ್ ಗೆ ಧಕ್ಕೆ ಆಗುವಂತಾಗುವುದು ಬೇಡ. ದಯಮಾಡಿ ಈ ವಿಚಾರವನ್ನು ಇಲ್ಲಿ ಅಂತ್ಯ ಹಾಡಿ. ಕ್ರಿಮಿನಲ್ ಸ್ವರೂಪದ ಆರೋಪ ಇದಾಗೋದಿಲ್ಲ ಎಂದು ಎಸ್ ಐಟಿ ಗೆ ಶಾಸಕ ಮಧುಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.

ಕೆ.ಜಿ ಬೊಪ್ಪಯ್ಯ ಕೂಡ ಎಸ್ ಐಟಿ ತನಿಖೆ ವಿರೋಧಿಸಿ ಸದನದಲ್ಲಿ ಮಾತನಾಡಿದರು. ಆಡಿಯೋ ರಿಲೀಸ್ ಮಾಡಿದ ಸಿಎಂ ನಡೆ ಬಗ್ಗೆ ಬೊಪ್ಪಯ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸದನದಲ್ಲಿ ಸದ್ದು ಗದ್ದಲ ಉಂಟಾಯಿತು.

 

Leave a Reply

Your email address will not be published.

Social Media Auto Publish Powered By : XYZScripts.com