ರಾಂಚಿ: ಶಾಲೆಯಲ್ಲಿ ಕಲುಷಿತ ಪ್ರಸಾದ ಸೇವಿಸಿ 40 ವಿದ್ಯಾರ್ಥಿ ಗಳು ಅಸ್ವಸ್ಥ

ಶಾಲೆಯೊಂದರಲ್ಲಿ ಪ್ರಸಾದ ಸೇವಿಸಿದ ಬಳಿಕ 40 ವಿದ್ಯಾರ್ಥಿ ಗಳು ಅಸ್ವಸ್ಥರಾದ ಘಟನೆ ಜಾರ್ಖಂಡ್‍ನ ಲೋಹಾರ್‍ದಗಾ ಎಂಬಲ್ಲಿ ನಡೆದಿದೆ.

ಕಲುಷಿತ ಆಹಾರದಿಂದ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕ ವಾಗಿದೆ ಎಂದು ಮೂಲಗಳು ಹೇಳಿವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಹೇಳಿದೆ.

ವಸಂತ ಪಂಚಮಿ ಪ್ರಯುಕ್ತ ಶಾಲೆಯಲ್ಲಿ ಪ್ರಸಾದದ ರೂಪದಲ್ಲಿ ಸಿಹಿ ನೀಡಿದ್ದರು. ಇದನ್ನು ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದು ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೂಡಲೇ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರು ಮಕ್ಕಳ ಸ್ಥಿತಿ ಗಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published.