ಬೆಂಗಳೂರಿನ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸದ ಬಳಿ ಪ್ರೊಟೆಸ್ಟ್
ಆಡಿಯೋ ಆಪರೇಷನ್ ಗೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆದೇಶಿಸಿ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಬೆಂಗಳೂರಿನ ಡಾಲರ್ಸ್ ಕಾಲೋನಿಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಿವಾಸದ ಬಳಿ ಘೋಷಣೆ ಕೂಗುತ್ತಾ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಆಡಿಯೋ ಆಪರೇಷನ್ ಮೈತ್ರಿ ಸರ್ಕಾರದ ಆರೋಪವೋ ಅಥವಾ ಸತ್ಯಾಂಸವೋ..? ಅನ್ನೋದರ ಬಗ್ಗೆ ತನಿಖೆ ನಡೆಯಬೇಕು. ಆಡಿಯೋ ಆಪರೇಷನ್ ತನಿಖೆಗೆ ಎಸ್ ಐಟಿ ತನಿಖೆಗೆ ಸಲಹೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರ ಘೋಷಣೆ
ಮಾಜಿ ಸಿಎಂ ಜಗದೀಶ್ ಶೆಟ್ಟರ್ , ತೇಜಸ್ವಿನಿ ಗೌಡ, ಗೋವಿಂದ ಜಾರಕಿಹೊಳಿ, ಕೆ.ಎಸ್ ಈಶ್ವರಪ್ಪ, ಪರಿಷತ್ ಉಪನಾಯಕ, ವೈ,ಎ ನಾರಾಯಣಸ್ವಾಮಿ ಸೇರಿ ಯಡಿಯೂರಪ್ಪ ವರ ನಿವಾಸದ ಬಳಿ ಸಿಎಂ ಹೆಚ್ ಡಿಕೆ ಹಾಗೂ ಸರ್ಕಾರದ ವಿರುದ್ಧ ಕಾರ್ಯಕರ್ತರ ಘೋಷಣೆ ಕೂಗಿದರು.