ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ತಿಳಿಸಿದ ಸಚಿವ ಆರ್.ವಿ. ದೇಶಪಾಂಡೆ

ದೇಶದಲ್ಲಿಯೇ ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯದ ವಸತಿ, ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತಿದೆ. ಕಾರಣ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಪೂರ್ಣಗೊಂಡ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯ ವರಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಧನ್ಯವಾದ ಕೃತಜ್ಞತೆ ತಿಳಿಸಿದ್ದಾರೆ.

ಅವಳಿ ನಗರದ ಆರು ಘೋಷಿತ ಕೊಳಗೇರಿಗಳಲ್ಲಿ 1056 ಮನೆಗಳನ್ನು 5753.21 ಲಕ್ಷ ರೂ ವೆಚ್ಚದಲ್ಲಿನಿರ್ಮಿಸಲಾಗುತ್ತಿದೆ. ಪಿ.ಎಂ.ಎ.ವೈ. ಯೋಜನೆ ಯಡಿಯಲ್ಲಿ 2350 ಮನೆಗಳನ್ನು ನಿರ್ಮಿಸಲಾಗಿದೆ. ಈ ಯೋಜನೆಗಳಿಗೆ ಭಾರತ ಸರ್ಕಾರದ ಶೇ 50, ಕರ್ನಾಟಕ ಸರ್ಕಾರದ ಶೇ 25 ಮತ್ತು ನಗರ ಸ್ಥಳೀಯ ಸಂಸ್ಥೆಗಳ ಶೇ 25 ರಷ್ಟು ಅನುದಾನ ದೊರಕಿದೆ ಎಂದಿದ್ದಾರೆ.

ಧಾರವಾಡದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆಗೆ ಕೆಲಗೇರಿ ಗ್ರಾಮದ ಚಿಕ್ಕಮಲ್ಲಿಗವಾಡದಲ್ಲಿ 470.21 ಎಕರೆ ನಿವೇಶನವನ್ನು ಕರ್ನಾಟಕ ಸರ್ಕಾರ ಉಚಿತವಾಗಿ ನೀಡಿದೆ. ಭಾರತೀಯ ಮಾಹಿತಿ ತಂತ್ರಜ್ಞಾನ (ಐಐಐಟಿ) ಸ್ಥಾಪನೆಗೆ ತಡಸಿನಕೊಪ್ಪ ಗ್ರಾಮದಲ್ಲಿ 60 ಎಕರೆ ನಿವೇಶನವನ್ನು ಕರ್ನಾಟಕ ಸರ್ಕಾರ ಉಚಿತವಾಗಿ ಒದಗಿಸಿದೆ.

ಧಾರವಾಡದಲ್ಲಿ ಐಐಟಿ ಮತ್ತು ಐಐಐಟಿ ಉನ್ನತ ಶಿಕ್ಷಣ ಸಂಸ್ಥೆಗಳು ಆರಂಭವಾಗಿರುವುದರಿಂದ ಉತ್ತರ ಕರ್ನಾಟಕವು ಸೇರಿದಂತೆ ರಾಜ್ಯಕ್ಕೆ ಉನ್ನತ ಜ್ಞಾನ, ತಂತ್ರಜ್ಞಾನ, ಅನುಭವ, ಹೊಸ ಸಂಶೋಧನೆಗಳು ಮತ್ತು ಮುಖ್ಯವಾಗಿ ಯುವಜನರ ಉದ್ಯೋಗ ಅರ್ಹತೆ ಹೆಚ್ಚಿಸಲು ಅನುಕೂಲವಾಗಿ ತನ್ಮೂಲಕ ಉದ್ಯಮ ವಲಯಕ್ಕೆ ಪೂರಕವಾದ ಸೇವಾವಲಯ ನಿರ್ಮಾಣ ಗೊಂಡಂತೆ ಆಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com