ಆಪರೇಷನ್ ಕಮಲ ಆಡಿಯೋ : ಬಿಎಸ್‍ವೈ ವಿರುದ್ಧ ಎಸಿಬಿಗೆ ದೂರು

ಆಪರೇಷನ್ ಕಮಲ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಜೆಡಿಎಸ್ ಮುಖಂಡ ಸಿದ್ದರಾಜು ಎಸಿಬಿಗೆ ದೂರು ದಾಖಲಿಸಿದ್ದಾರೆ.

ಫೆ.8 ರಂದು ರಾಜ್ಯ ಬಜೆಟ್ ಅಧಿವೇಶನಕ್ಕೂ ಮುನ್ನ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಆಪರೇಷನ್ ಕಮಲ ನಡೆಸಿದೆಎ ಎಂದು ಆರೋಪಿಸಿ ಆಡಿಯೋವೊಂದನ್ನು ರಿಲೀಸ್ ಮಾಡಿದ್ದರು. ಆಡಿಯೋದಲ್ಲಿ ಬಿಎಸ್‍ವೈ ಗುರುಮಿಠಕಲ್ ಶಾಸಕ ನಾಗನಗೌಡಗೆ ಆಮಿಷವೊಡ್ಡಿದ್ದಾರೆ.

ಈ ಸಂಬಂಧ ನಾಗನಗೌಡ ಪುತ್ರ ಶರಣಗೌಡ ನಾಯಕ ಜೊತೆ ಬಿಎಸ್‍ವೈ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಬಿಡುಗಡೆ ಮಾಡಿದ್ದರು. ಸದ್ಯ ಈ ಆಡಿಯೋ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕಾರಣ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಸಿಬಿಗೆ ಜೆಡಿಎಸ್ ದೂರು ನೀಡಿದೆ.

Leave a Reply

Your email address will not be published.