ಭಾರತೀಯ ವಾಯು ಸೇನೆಗೆ ಹೆಚ್ಚು ಬಲ : ಬೋಯಿಂಗ್‍ನಿಂದ 4ಚಿನೂಕ್ ಹೆಲಿಕಾಪ್ಟರ್‍ಗಳ ಹಸ್ತಾಂತರ

ಭಾರತೀಯ ವಾಯು ಸೇನೆಗೆ ಮತ್ತಷ್ಟು ಬಲ ಬಂದಿದ್ದು, ಬಹು ಬೇಡಿಕೆಯ ಚಿನೂಕ್ CH47F (I) ಹೆಲಿಕಾಪ್ಟರ್‍ಗಳು ಸೇನೆಯ ಬತ್ತಳಿಕೆ ಸೇರಿವೆ.

ಬಹುಉಪಯೋಗಿ ಹೆಲಿಕಾಪ್ಟರ್‍ಗಳಾಗಿರುವ ಈ ಚಿನೂಕ್ CH47F (I) ಹೆಲಿಕಾಪ್ಟರ್ ಗಳು ಎಲ್ಲ ಬಗೆಯ ಸೇನಾ ಕಾರ್ಯಾಚರಣೆಗೆ ನೆರವಾಗಲಿದ್ದು, ಪ್ರಮುಖವಾಗಿ ಪ್ರವಾಹ, ಅಗ್ನಿ ಪ್ರಮಾದ, ಸೇನಾ ಪಸ್ತುಗಳ ಪೂರೈಕೆಯಂತಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅಲ್ಲದೆ ಸೇನಾ ಕ್ಯಾಂಪ್ ಗಳಿಗೆ ಸೈನಿಕರ ರವಾನೆ, ಫಿರಂಗಿಗಳ ರವಾನೆ, ಇತರೆ ಶಸ್ತ್ರಾಸ್ತ್ರಗಳ ಪೂರೈಕೆ, ಇಂಧನ ಸಾಗಿಸುವುದೂ ಸೇರಿದಂತೆ ಚಿನೂಕ್ CH47F (I) ಹೆಲಿಕಾಪ್ಟರ್ ಬಹುಪಯೋಗಿ ಪಾತ್ರ ನಿರ್ವಹಿಸುತ್ತದೆ.

ಈ ಹಿಂದೆ ಅಂದರೆ 2015 ಭಾರತ ಸರ್ಕಾರ ಅಮೆರಿಕ ಮೂಲದ ಬೋಯಿಂಗ್ ಸಂಸ್ಥೆಯೊಂದಿಗೆ ಮಹತ್ತರ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 15 ಚಿನೂಕ್ CH47F (I) ಹೆಲಿಕಾಪ್ಟರ್ ಗಳು, 22 ಅಪಾಚೆ ಹೆಲಿಕಾಪ್ಚರ್ ಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗ ಒಪ್ಪಂದದ ಅನ್ವಯ ಇದೀಗ ನಾಲ್ಕು ಚಿನೂಕ್ CH47F (I) ಹೆಲಿಕಾಪ್ಟರ್ ಗಳು ಮತ್ತು ಅವುಗಳ ಬಿಡಿಭಾಗಗಳು ಬಂದಿಳಿದಿವೆ. ಶೀಘ್ರದಲ್ಲೇ ಚಂಡೀಘಡ ವಾಯುನೆಲೆಗೆ ರವಾನೆಯಾಗಲಿವೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com