ಸದನದಿಂದ ಹೊರನಡೆದ ಶಾಸಕ : ಸಭಾಪತಿಗೆ ಚ್ಯುತಿ ತಂದಿರುವವರ ವಿರುದ್ದ ಕ್ರಮ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕ ಶಿವನಗೌಡ ನಾಯಕ್ ದೇವದುರ್ಗದ ಐಬಿಯಲ್ಲಿ ಗುರುಮಿಟ್ಕಲ್ ಕ್ಷೇತ್ರದ ಶಾಸಕ ನಾಗನಗೌಡ ಅವರ ಪುತ್ರ ಶರಣ ಗೌಡರ ಜೊತೆ ನಡೆಸಿದ್ದಾರೆನ್ನಲಾದ ಸಂಭಾಷಣೆಯ ಚರ್ಚೆ, ಅಧಿವೇಶನದಲ್ಲಿ ನಡೆಯುತ್ತಿದ್ದ ಮಧ್ಯಯೇ ಶಾಸಕರೊಬ್ಬರು ಹೊರಹೋದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.

ಸಚಿವ ಕೃಷ್ಣಬೈರೇಗೌಡ, ಶಾಸಕರುಗಳಾದ ಮಾಧುಸ್ವಾಮಿ, ರಾಮಸ್ವಾಮಿ, ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದವರು ಈ ಕುರಿತು ಮಾತನಾಡಿದ್ದು, ಸಭಾಪತಿ ಸ್ಥಾನದ ಗೌರವಕ್ಕೆ ಚ್ಯುತಿ ತಂದಿರುವವರ ವಿರುದ್ದ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ, ಇದೆಲ್ಲದರ ಕೇಂದ್ರಬಿಂದು ಹಾಗೂ ಶಾಸಕರ ರಾಜೀನಾಮೆಯನ್ನು ತಕ್ಷಣವೇ ಸ್ವೀಕರಿಸಲು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಈಗಾಗಲೇ 50 ಕೋಟಿ ರೂ. ನೀಡಲಾಗಿದೆ ಎಂಬ ಮಾತನಾಡಿದ್ದಾರೆಂದು ಹೇಳಲಾಗುತ್ತಿರುವ ಶಾಸಕ ಶಿವನಗೌಡ ನಾಯಕ್, ಈ ವಿಚಾರದ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಸದನದಿಂದ ಎದ್ದು ಹೊರ ನಡೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com