ಸಾಮಾಜಿಕ ಜಾಲತಾಣದ ಮೂಲಕ ಪರಿಚಯ : ಕಿರುಕುಳದಿಂದ ಬೇಸತ್ತ ಯುವಕ ಆತ್ಮಹತ್ಯೆ

ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಇಬ್ಬರು ಮಹಿಳೆಯರ ಕಿರುಕುಳ ತಾಳಲಾರದೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಈ ಇಬ್ಬರು ನಿತ್ಯ ಆತನೊಂದಿಗೆ ಚಾಟ್ ಮಾಡುತ್ತಿದ್ದರು, ಬಳಿಕ ಹಣದ ಬೇಡಿಕೆ ಇಟ್ಟಿದ್ದರು, ಇದರಿಂದ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಕಲಬುರಗಿಯ ಜೇವರ್ಗಿಯವನಾದ ಅತೀಶ್ ಎಸ್. ನಾಯಕ್ ನೇಣಿಗೆ ಶರಣಾದ ಯುವಕ. ಈತ ಬೆಂಗಳೂರಿನ ಹಾರಿಝನ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತ ಕಾಡುಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದ ಶ್ರೀರಾಮ್ ಪಿಜಿನಲ್ಲಿ ವಾಸಿಸಿದ್ದನು.

ಯುವಕ ತನ್ನ ಕೋಣೆಯಲ್ಲಿದ್ದ ಸೀಲಿಂಗ್ ಫಾನ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ಇನ್ನಿಬ್ಬರು ರೂಮ್ ಮೇಟ್ ಗಳು ಕಾಲೇಜು ಮುಗಿಸಿ ಹಿಂತಿರುಗಿದಾಗ ಈ ಘಟನೆ ಬೆಳಕು ಕಂಡಿದೆ. ಡೆತ್‌ನೋಟ್‌ನಲ್ಲಿ ಕಿರುಕುಳದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇಬ್ಬರು ಮಹಿಳೆಯರಿಂದ ಕಿರುಕುಳ, ಯುವಕ ನೇಣಿಗೆ ಶರಣು

Leave a Reply

Your email address will not be published.

Social Media Auto Publish Powered By : XYZScripts.com