ಅವನು ಅವಳು ಮತ್ತು ಅನ್ನ-ರಸಂ : ದೀಪಿಕಾ ಅಡುಗೆಯಲ್ಲಿ ನಗು-ನಾಚಿಕೆ

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು ಹಲವರು ಹೇಳಿದರೆ, ರಣವೀರ್ ಸಿಂಗ್ ಹೇಳುವುದೇ ಬೇರೆ. ಅವರ ಪ್ರಕಾರ ದೀಪಿಕಾ ನಗು-ನಾಚಿಕೆಗಿಂತ ರುಚಿ ಬೇರೆ ಇಲ್ಲ.
ಹೌದು.. ಇದೀಗ ಅವರು ಪತ್ನಿ ದೀಪಿಕಾ ಪಡುಕೋಣೆಯ ಅಡುಗೆಯ ರುಚಿ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಹೊಸ ಸಿನಿಮಾ ‘ಗಲ್ಲಿ ಬಾಯ್ಸ್’ ಪ್ರಮೋಷನ್ ಸಂದರ್ಭ ಅಡುಗೆ ಮನೆಯ ರಹಸ್ಯ ಹೇಳಿಕೊಂಡಿದ್ದಾರೆ.
ದೀಪಿಕಾ ನನಗೆ ಅನ್ನ-ರಸಂ ಮಾಡಿ ಬಡಿಸಿದ್ದಾಳೆ. ಅದೆಷ್ಟು  ರುಚಿಯಾಗಿತ್ತೆಂದರೆ ಅದರ ರೆಸಿಪಿ ಏನಂತ ನನಗೆ ಗೊತ್ತಿಲ್ಲ. ಆದರೆ ಅವಳ ನಗು ಮತ್ತು ನಾಚಿಕೆ ಅನ್ನ-ರಸಂನ ರುಚಿ ಹೆಚ್ಚಿಸಿದ್ದಂತೂ ನಿಜ ಎಂದು ಅವರು ಪತ್ನಿಯ ಅಡುಗೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com