ಅತೃಪ್ತರ ಬೇಡಿಕೆ ಈಡೇರಿಕೆಗೆ ಸರ್ಕಾರ ನಿರ್ಧಾರ : ಸಿಎಂ ಬಂಪರ್ ಆಫರ್

ಸಚಿವ ಸ್ಥಾನ ಕೈತಪ್ಪಿದ್ದರಿಂದ ಅತೃಪ್ತರಾದ ಕೈ ಶಾಸಕರು ಬಿಜೆಪಿ ಸೇಋಉವ ಸಾಧ್ಯತೆಯಿಂದ ಸಾಕಷ್ಟು ಗೊಂದಲುಗಳು ರಾಜ್ಯ ರಾಜಕಾರಣದಲ್ಲಿ ಸೃಷ್ಠಿಯಾಗಿದ್ದವು. ಆದರೆ ಬಿಜೆಪಿ ಆಪರೇಷನ್ ಕಮಲ ಫೇಲ್ ಆಗುತ್ತಲೇ ಬಂದಿದೆ. ಆದರೂ ಕೆಲ ಅತೃಪ್ತ ಶಾಸಕರು ಬಿಜೆಪಿ ಸೇರಲು ಪಟ್ಟು ಹಿಡಿದು ಕುಳಿತಿದ್ದಾರೆ. ಈ ಕಾರಣದಿಂದ ಮುಂಬೈನಲ್ಲಿ ಬೀಡು ಬಿಟ್ಟಿರುವ ಶಾಸಕರು ದೋಸ್ತಿ ಸರ್ಕಾರದ ಸಂಪರ್ಕಕ್ಕೆ ಸಿಗುತ್ತಿಲ್ಲ.

ಹೀಗಾಗಿ ಸಿಎಂ ಕುಮಾರಸ್ವಾಮಿ ಅವರೇ ಸ್ವತ: ಅತೃಪ್ತರಿಗೆ ಕರೆ ನೀಡಿದ್ದಾರೆ. ಜೊತೆಗೆ ಅವರ ಬೇಡಿಕೆಗಳನ್ನೆಲ್ಲಾ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಮುಂಬೈನಲ್ಲಿ ಬೀಡು ಬಿಟ್ಟಿರುವ ಶಾಸಕರು ಕೂಡಲೇ ಬೆಂಗಳೂರಿಗೆ ಆಗಮಿಸಲು ತಿಳಿಸಿದ್ದಾರೆ.

ಕೆ.ಸಿ. ವೇಣುಗೋಪಾಲ ಅವರು ಕೂಡ ಅತೃಪ್ತರ ಬೇಡಿಕೆ ಈಡೇರಿಕೆಗೆ ಒಪ್ಪಿದ್ದಾರೆ.  ಸಚಿವ ಸ್ಥಾನ ಅಥವಾ ಇನ್ನಿತರ ಸ್ಥಾನಗಳನ್ನು ನೀಡಲು ಸಿಎಂ ತೀರ್ಮಾನ ಮಾಡಿದ್ದಾರೆ.

ಮಹೇಶ್ ಕುಮಟಳ್ಳಿ, ನಾಗೇಂದ್ರ ಅವರೊಂದಿಗೆ ಮುಂಬೈ ನಲ್ಲಿ ಬೀಡು ಬಿಟ್ಟಿರುವ ಇನ್ನಿತರ ಅತೃಪ್ತರ  ಬೇಡಿಕೆ ಈಡೇರಿಕೆಗೆ ಸರ್ಕಾರ ನಿರ್ಧಾರ ಮಾಡಿದೆ. ಅತೃಪ್ತರು ಇದಕ್ಕೆ ಸ್ಪಂಧಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

 

Leave a Reply

Your email address will not be published.

Social Media Auto Publish Powered By : XYZScripts.com