ನಾಲ್ಕು ಬೆರಳು ಢಮಾರ್, ಗೇಮ್ ಓವರ್..?! – ೮ ವರ್ಷದ ಬಾಲಕನ ಪರಿಸ್ಥಿತಿ ಚಿಂತಾಜನಕ

ಚಿಕ್ಕಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡುವ ಮುನ್ನ ಒಮ್ಮೆ ಯೋಚಿಸಿ. ಅದರಲ್ಲೂ ಕಡಿಮೆ ಬೆಲೆಗೆ ಫೋನ್ ಸಿಗುತ್ತೆ ಅಂತ ಕೊಳ್ಳುವ ಮೊದಲು ಎರಡೆರಡು ಬಾರಿ ಯೋಚಿಸಿ.
ಏಕೆಂದರೆ ಬರೀ ಒಂದೂವರೆ ಸಾವಿರಕ್ಕೆ ೩ ಮೊಬೈಲ್ ಫೋನ್ ಸಿಗುತ್ತೆ ಎಂದು ತಂದೆ ತಂದಿದ್ದ ಫೋನ್ಗಳಲ್ಲಿ ಒಂದು ಫೋನ್ ಮಗನ ನಾಲ್ಕು ಬೆರಳುಗಳನ್ನೇ ಕಿತ್ತುಕೊಂಡಿದೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಜಿರ್ಗಾದಲ್ಲಿ ಈ ಘಟನೆ ನಡೆದಿದೆ.
ಶ್ರೀಪತ್ ಜಾಧವ್ ಎಂಬ ರೈತ ಒಂದೂವರೆ ತಿಂಗಳ ಹಿಂದೆ ಆನ್‌ಲೈನ್ ನಲ್ಲಿ ಆಫರ್ ಮೇಲೆ ‘ಐ ಕಾಲ್ ಕೆ-೭೨’ ಎಂಬ ೩ ಮೊಬೈಲ್ ಫೋನ್ ಖರೀದಿಸಿದ್ದರು. ಅದಕ್ಕೆ ಒಂದು ವಾಚ್ ಕೂಡ ಫ್ರೀ ಸಿಕ್ಕಿತ್ತು. ಟೈಮ್ ಚೆನ್ನಾಗಿರಲಿಲ್ಲ ಅನಿಸುತ್ತೆ, ಭಾನುವಾರ ಅವರ ಮಗ ಪ್ರಶಾಂತ್ ಗೇಮ್ಸ್ ಆಡುವಾಗ ಮೊಬೈಲ್ ಸಿಡಿದು ನಾಲ್ಕು ಬೆರಳುಗಳು ಛಿದ್ರಗೊಂಡಿವೆ.

Leave a Reply

Your email address will not be published.

Social Media Auto Publish Powered By : XYZScripts.com