ದೆಹಲಿ : ಏಳು ವರ್ಷದ ಮಗನನ್ನೇ ಬೇಡಿ ಹಾಕಿದ ತಾಯಿ! ವಿಡಿಯೋ ವೈರಲ್

ಏಳು ವರ್ಷದ ಬಾಲಕನೊಬ್ಬನನ್ನು ತಾಯಿಯೇ ಬೆಂಗಳೂರಿನಲ್ಲಿ ಕಟ್ಟಿ ಹಾಕಿರುವ ವಿಡಿಯೋವೊಂದು ಸೋಶಿ ಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೆಹಲಿ ಮೂಲದ ಕಾರ್ಯಕರ್ತೆಯೊಬ್ಬರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ತನಿಖೆ ನಡೆಸಿದ ಪೊಲೀಸರು ಬಾಲಕನ ಅತಿಯಾದ ತುಂಟತನದಿಂದ ಬೇಸತ್ತು ತಾಯಿಯೇ ಬಾಲಕನ ಕೈಗೆ ಬೇಡಿ ಹಾಕಿ ಕಟ್ಟಿ ಹಾಕಿದ್ದರು ಎನ್ನುವುದು ಗೊತ್ತಾಗಿದೆ.

ವಿಡಿಯೋ ಬಗ್ಗೆ ಮಾಹಿತಿ ಪಡೆದ ಸೈಬರ್ ಪೊಲೀಸರು ತನಿಖೆ ನಡೆಸಿದಾಗ ಅದು ಹೆಚ್‍ಎಎಲ್ ರಸ್ತೆಯಲ್ಲಿ ತೆಗೆದಿರುವುದು ಎನ್ನುವುದು ಖಚಿತವಾಗಿದೆ. ನಂತರ ಹೆಚ್‍ಎಎಲ್ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಾಲಕನ್ನು ಬಿಡುಗಡೆ ಮಾಡಿ ದ್ದಾರೆ. ಬಳಿಕ ತಾಯಿಯನ್ನು ವಶಕ್ಕೆ ಪಡೆದು ಪೊಲೀಸರು ಆಕೆಗೆ ಬುದ್ಧಿ ಹೇಳಿ ವಾಪಸ್ ಕಳುಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com