ಚಿತ್ರದುರ್ಗ : ಕಳೆದೆರಡು ದಿನಗಳಿಂದ ದಿಢೀರ್ ಬಿರುಗಾಳಿ ಮಳೆ, ಅಪಾರ ಹಾನಿ

ಕಳೆದೆರಡು ದಿನಗಳಿಂದ ದಿಢೀರ್ ಮಳೆಯಾಗುತ್ತಿದ್ದು, ಚಿತ್ರದುರ್ಗದಲ್ಲಿ ನಿನ್ನೆ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಗ್ರಾಮಗಳಲ್ಲಿನ ಕೆಲವು ಮನೆಗಳು ಹಾನಿಗೊಂಡಿವೆ.
ಕಳೆದ ರಾತ್ರಿಯಲ್ಲಿ ಸುರಿದ ಮಳೆಯಿಂದಾಗಿ ತಾಲೂಕಿನ ದೊಡ್ಡಾಲ ಘಟ್ಟ ಗ್ರಾಮದಲ್ಲಿ ಸಾಕಷ್ಟು ಮನೆಗಳು ಕುಸಿದಿವೆ.

ಮಳೆಯ ರಭಸಕ್ಕೆ ಮನೆ ಮೇಲಿನ ಶೀಟುಗಳು ಹಾರಿ ಹೋಗಿದ್ದು, ಕಬ್ಬಿಣದ ತುಂಡು ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ 6 ಮನೆಗಳಿಗೆ ಹಾನಿಯಾಗಿವೆ.
ಗ್ರಾಮದ ನಾಗರಾಜಪ್ಪ, ಗೀತಮ್ಮ, ಗೋವಿಂದಪ್ಪ, ರಂಗಪ್ಪ, ಕರಿಯಮ್ಮ, ರೇಣುಕಮ್ಮ ಎಂಬುವರ ಮನೆಗಳಿಗೆ ಹಾನಿ ಉಂಟಾ ಗಿದ್ದು, ಮಳೆಯಿಂದ ಸಂತ್ರಸ್ತ ಕುಟುಂಬಗಳು ರಾತ್ರಿಯಿಡಿ ಪರದಾಡ ಬೇಕಾಯಿತು. ಗಾಳಿ, ಮಳೆಯ ಕಾರಣಕ್ಕೆ ವಿದ್ಯುತ್ ಕಡಿತಗೊಂಡು ಪರಿಸ್ಥಿತಿ ಇನ್ನಷ್ಟು ಕೆಡಿಸಿತ್ತು, ಎಂದು ತಿಳಿದು ಬಂದಿದೆ.

Leave a Reply

Your email address will not be published.