ಬಿಗ್ ಬಾಸ್ ಸೀಜನ್ 6 ಸ್ಪರ್ಧಿ ಕವಿತಾ ಗೌಡ ದೂರು : ಆಂಡ್ರ್ಯೋ ವಿರುದ್ಧ ದೂರು

ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ತನಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಸೀಜನ್ 6 ಸ್ಪರ್ಧಿ ಕವಿತಾ ಗೌಡ ಅವರು ಮಹಿಳಾ ಆಯೋಗದ ಮೆಟ್ಟಿಲೇರಿ ದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಯೊಂದನ್ನು ಹಿಡಿದು ಪ್ರತಿಸ್ಪರ್ಧಿ ಆಂಡ್ರ್ಯೋ ಜೈಪಾಲ್ ವಿರುದ್ಧ ಕವಿತಾ ಗೌಡ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿಗೆ ದೂರು ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲದೇ ಹೊರ ಬಂದ ಮೇಲೆ ಆಂಡ್ರ್ಯೂ ಕಿರುಕುಳ ನೀಡಿದ್ದಾರೆ. ಶೋ ಮುಗಿಸಿದ ಬಳಿಕವೂ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಆಂಡ್ರ್ಯೂ ಮತ್ತು ಬಿಗ್ ಬಾಸ್ ಶೋ ಮೇಲ್ವಿಚಾರಕ ಗುರುದಾಸ್ ಶೆಣೈ ವಿರುದ್ಧ ಕವಿತಾ ಗೌಡ ದೂರು ದಾಖಲಿಸಿದ್ದಾರೆ.

Leave a Reply

Your email address will not be published.