ಪೈಲಟ್‍ಗಳ ಲಭ್ಯತೆಯ ಕೊರತೆ : 30 ಇಂಡಿಗೋ ವಿಮಾನಯಾನ ರದ್ದು

ವಿಮಾನಯಾನಿಗಳಿಗೆ ಮಿತವ್ಯಯಕಾರಿ ಎಂದೇ ಪರಿಗಣಿತವಾಗಿರುವ ಇಂಡಿಗೋ ವಿಮಾನಯಾನ ಸಂಸ್ಥೆಯು ದೇಶಾದ್ಯಂತ ತನ್ನ ಹಲವಾರು ವಿಮಾನ ಯಾನಗಳನ್ನು ರದ್ದುಗೊಳಿಸಿದೆ. ಅದರಲ್ಲೂ ಮುಖ್ಯವಾಗಿ ಹೈದ್ರಾಬಾದ್, ಚೆನ್ನೈ, ಜೈಪುರ ಭಾಗಗಳಲ್ಲಿ ಪ್ರಮುಖವಾಗಿ ಈ ಯಾನ ರದ್ದತಿಗಳನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ವಾರಾಂತ್ಯದಲ್ಲಿ ಈ ಯಾನ ರದ್ದತಿ ನಡೆದಿದ್ದು ಸೋಮವಾರವೂ ಸಹ ಸರಿ ಸುಮಾರು 30 ಇಂಡಿಗೋ ವಿಮಾನಗಳ ಯಾನ ರದ್ದುಗೊಳ್ಳುವ ಸಂಭವ ಇದೆ. ಇವುಗಳಲ್ಲಿ ಚೆನ್ನೈ ಮೂಲಕ ಹಾರಾಟ ನಡೆಸುವ ಸುಮಾರು 8, ಹೈದ್ರಾಬಾದ್ ಮೂಲಕ ಹಾರಾಟ ನಡೆಸುವ ಸುಮಾರು 6 ಮತ್ತು ಜೈಪುರದಿಂದ 3 ವಿಮಾನಗಳ ಯಾನ ಸೋಮವಾರ ರದ್ದುಗೊಳ್ಳುವ ಮುನ್ಸೂಚನೆ ದೊರೆತಿದೆ.

ಪೈಲಟ್‍ಗಳ ಲಭ್ಯತೆಯ ಕೊರತೆಯೇ ಈ ದಿಢೀರ್ ಯಾನ ರದ್ದತಿಗೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಇಂಡಿಗೋ ಸಂಸ್ಥೆಯ ಹೇಳಿಕೆಯ ಪ್ರಕಾರ ವಾತಾವರಣದಲ್ಲಿನ ಏರುಪೇರಿನ ಕಾರಣದಿಂದಾಗಿ ಈ ಕ್ರಮ ಕೈಗೊಳ್ಳ ಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com