2019 ವಿಶ್ವಕಪ್ ನಲ್ಲಿ ಭಾರತ ತಂಡದಲ್ಲಿ ಧೋನಿ ಮಹತ್ವವೇನು..? ಯುವಿ ಹೇಳಿದ್ದೇನು..?

ಮೇ 30ರಿಂದ ಇಂಗ್ಲೆಂಡಿನಲ್ಲಿ 2019ರ ಐಸಿಸಿ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು, ಟ್ರೋಫಿ ಮೇಲೆ ಕಣ್ಣಿಟ್ಟಿರುವ ತಂಡಗಳು, ಉತ್ತಮ ಆಟಗಾರರ ಪಡೆಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಈಗಿನಿಂದಲೇ ಲೆಕ್ಕಾಚಾರದಲ್ಲಿ ತೊಡಗಿವೆ.

ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತವೂ ಒಂದಾಗಿದೆ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿದೆ. 2011ರಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡದ ನಾಯಕರಾಗಿದ್ದ ಎಮ್.ಎಸ್ ಧೋನಿಗೆ 2019ರ ವಿಶ್ವಕಪ್ ನಲ್ಲಿ ಭಾರತ ತಂಡದಲ್ಲಿ ಅವಕಾಶ ಸಿಗುವುದೇ ಎಂಬುದು ಕುತೂಹಲ ಕೆರಳಿಸಿದೆ.

ಟೀಮ್ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಸ್ಥಾನ ಸಿಗಲಿದೆಯೇ..? ಅಥವಾ ಆಯ್ಕೆಗಾರರು ಬೇರೊಬ್ಬ ಆಟಗಾರನಿಗೆ ಮಣೆ ಹಾಕುವರೇ..? ಟೀಮ್ ಇಂಡಿಯಾ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಬೇರೆ ಆಟಗಾರನಿಗೆ ನೀಡುವರೇ..? ಎಂಬುದರ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆ ಆರಂಭವಾಗಿದೆ.

Image result for yuvraj dhoni

ಈ ಬಗ್ಗೆ 2007 ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದಿದ್ದ ಆಲ್ರೌಂಡರ್ ಯುವರಾಜ್ ಸಿಂಗ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Image result for yuvraj dhoni

‘ ಮಾಹಿ ಅದ್ಭುತ ಕ್ರಿಕೆಟ್ ಬ್ರೇನ್ ಹೊಂದಿದ್ದಾರೆ. ಒಬ್ಬ ವಿಕೆಟ್ ಕೀಪರ್ ಗೆ ಪಂದ್ಯದ ಗತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇಷ್ಟು ವರ್ಷಗಳ ಕಾಲ ಧೋನಿ ಈ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆ. ಧೋನಿ ಭಾರತ ಕ್ರಿಕೆಟ್ ತಂಡ ಕಂಡಿರುವ ಶ್ರೇಷ್ಟ ನಾಯಕರಲ್ಲಿ ಒಬ್ಬರಾಗಿದ್ದಾರೆ. ತಂಡ ಯುವ ಆಟಗಾರರು ಹಾಗೂ ನಾಯಕ ವಿರಾಟ್ ಕೊಹ್ಲಿಗೆ ಧೋನಿ ಮಾರ್ಗದರ್ಶನ ಮಾಡಬಲ್ಲರು ‘

Image result for yuvraj dhoni

‘ 2019ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಪಾತ್ರ ಮಹತ್ವದ್ದಾಗಿದೆ. ಪಂದ್ಯದ ವೇಳೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಧೋನಿಯವರ ಅನುಭವ ಸಹಕಾರಿಯಾಗಲಿದೆ. ಇತ್ತೀಚಿನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮಾಹಿ ಉತ್ತಮವಾಗಿ ಆಡಿದ್ದಾರೆ. ಧೋನಿ ಮುಂಚಿನಂತೆಯೇ ಬ್ಯಾಟ್ ಬೀಸುತ್ತಿರುವುದು ಸಂತಸ ನೀಡಿದೆ, ನಾನು ಅವರಿಗೆ ಶುಭ ಹಾರೈಸುತ್ತೇನೆ ‘ ಎಂದು ಯುವರಾಜ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com