ರಾಹುಲ್ ‘ಲೋಕ್’ ತಾಲೀಮು : ಲೋಕಸಭೆ ಚುನಾವಣೆಗೆ ಬರ್ಜರಿ ಸಿದ್ಧತೆ

ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ಸಭೆ ಕರೆಯಲಾಗಿದೆ. ಸಭೆಯಲ್ಲಿ ಎಲ್ಲಾ ರಾಜ್ಯದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಪಿಸಿಸಿ ಅಧ್ಯಕ್ಷರು, ಭಾಗಿಯಾಗಲಿದ್ದಾರೆ. ದೆಹಲಿಯ ವಾರ್ ರೂಂ ನಲ್ಲಿ ನಡೆಯಲಿರುವ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಜೊತೆಗೆ ಮೈತ್ರಿಯಿಂದಾಗುವ ಲಾಭ-ನಷ್ಟ, ಲೋಕಸಭೆಗೆ ಚುನಾವಣೆಗೆ ಬೇಕಾಗಿರುವ  ಟಿಪ್ಸ್ ಕೊಡಲಿದ್ದಾರೆ.

ಮೀಟಿಂಗ್ ನಲ್ಲಿ ಎಲ್ಲಾ ರಾಜ್ಯದ ಬಗ್ಗೆ, ಮುಂದಿನ ಕಾರ್ಯ ನೀತಿ ಬಗ್ಗೆ, ಎಲ್ಲಾ ರಾಜ್ಯಗಳಲ್ಲಿ ಪಕ್ಷ ಎಷ್ಟು ಸ್ಥಾನಗಳನ್ನ ಗಳಿಸಬೇಕು ಮತ್ತು ಬಿಜೆಪಿಗೆ ಎಷ್ಟು ಸ್ಥಾನಗಳನ್ನು ಬಿಟ್ಟು ಕೊಡಬೇಕು ಅನ್ನೋದರ ಪೂರ್ವ ಮಹಿತಿ ಸಿದ್ಧತೆ ಬಗ್ಗೆ ಚರ್ಚೆ ಮಾಡಲಾಗುತ್ತದೆ.

ಸಭೆಯಲ್ಲಿ ರಾಜ್ಯದ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಭಾಗಿಯಾಗಲಿದ್ದು, ಲೋಕಸಭೆ ಚುನಾವಣೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

 

 

 

 

 

 

 

Leave a Reply

Your email address will not be published.