Health – Amla Benefits : ನೆಲ್ಲಿಕಾಯಿ ಸೇವನೆಯಿಂದಾಗುವ 6 ಅದ್ಭುತ ಲಾಭಗಳು..!

ನೆಲ್ಲಿಕಾಯಿಯ ಹೆಸರು ಕೇಳಿದೊಡನೆ ಅನೇಕ ಜನರಿಗೆ ಬಾಯಲ್ಲಿ ನೀರೂರುತ್ತದೆ. ಆದರೆ ನೆಲ್ಲಿಕಾಯಿ ಬರೀ ತಿನ್ನಲು ರುಚಿ ಮಾತ್ರವಲ್ಲದೇ, ದೇಹಾರೋಗ್ಯದ ದೃಷ್ಟಿಯಿಂದ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ. ನೆಲ್ಲಿಕಾಯಿ ಸೇವನೆಯಿಂದಾಗುವ ಅದ್ಭುತ ಲಾಭಗಳು ಇಂತಿವೆ..

1) ನೆಲ್ಲಿಕಾಯಿಯಲ್ಲಿರುವ ಕ್ರೋಮಿಯಮ್ ಅಂಶ, ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಗಟ್ಟಿ ಹೃದಯಾಘಾತ ಸಂಭವಿಸುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ನೆಲ್ಲಿಕಾಯಿ ಹೃದಯದ ಸ್ನಾಯುಗಳನ್ನು ಬಲಪಡಿಸುವ ಮೂಲಕ ದೇಹದ ರಕ್ತಪರಿಚಲನೆ ಉತ್ತಮಪಡಿಸುವಲ್ಲಿ ಸಹಕಾರಿಯಾಗಿದೆ.

2) ಅಪಾರ ಪ್ರಮಾಣದಲ್ಲಿ ‘ಸಿ’ ವಿಟ್ಯಾಮಿನ್ ಹೊಂದಿರುವ ನೆಲ್ಲಿಕಾಯಿ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆಲ್ಲಿಕಾಯಿ ಆ್ಯಂಟಿ ಆಕ್ಸಿಡೆಂಟ್ ಆಗಿ ವರ್ತಿಸುವ ಮೂಲಕ ದೇಹದಲ್ಲಿರುವ ಫ್ರೀ ರ್ಯಾಡಿಕಲ್ ಗಳ ಸಂಖ್ಯೆಯನ್ನು ನಿಯಂತ್ರಿಸಿ ಶರೀರದ ಮುಪ್ಪಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸತ್ತದೆ.

3) ಕೆರಟಿನ್ ಹಾಗೂ ‘ಎ’ ಜೀವಸತ್ವ ಹೇರಳವಾಗಿರುವ ನೆಲ್ಲಿಕಾಯಿಯ ಜ್ಯೂಸ್ ಸೇವನೆಯು, ದೃಷ್ಟಿಯನ್ನು ಸುಧಾರಿಸಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

4) ಕೆರಟಿನ್, ಐರನ್ ಅಂಶವನ್ನು ಅಪಾರ ಪ್ರಮಾಣದಲ್ಲಿ ಹೊಂದಿರುವ ನೆಲ್ಲಿಕಾಯಿ ಕೂದಲಿನ ಆರೋಗ್ಯಕ್ಕೆ ಅತ್ಯಂತ ಲಾಭಕಾರಿಯಾಗಿದೆ. ತಲೆಕೂದಲ ಬುಡವನ್ನು ಸದೃಢಗೊಳಿಸಿ, ಬೆಳವಣಿಗೆಯನ್ನು ವೃದ್ಧಿಸುತ್ತದೆ.

5) ವಿಟಾಮಿನ್ ‘ಎ’, ವಿಟಾಮಿನ್ ‘ಸಿ’, ಪಾಲಿ ಫಿನಾಲ್, ಅಲ್ಕಲಾಯ್ಡ್, ಫ್ಲೇವನಾಯ್ಡ್ ಗಳನ್ನು ಹೇರಳವಾಗಿ ಹೊಂದಿರುವ ನೆಲ್ಲಿಕಾಯಿ, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

6) ನಾರಿನಂಶ ಹೊಂದಿರುವ ನೆಲ್ಲಿಕಾಯಿ ಜೀರ್ಣಶಕ್ತಿಯನ್ನು ವೃದ್ಧಿಸುವಲ್ಲಿ ಸಹಕರಿಸಿ, ಅತಿಸಾರ ಹಾಗೂ ಅತಿಯಾದ ಭೇದಿಯಂತಹ ತೊಂದರೆಗಳಿಂದ ನಮ್ಮನ್ನು ದೂರವಿರಿಸುತ್ತದೆ.

ನೆಲ್ಲಿಕಾಯಿಯನ್ನು ನೇರವಾಗಿಯೂ ತಿನ್ನಬಹುದು. ಜ್ಯೂಸ್ ಮಾಡಿ ಇಲ್ಲವೆ ಪೌಡರ್ ರೂಪದಲ್ಲಿಯೂ ಸೇವಿಸಬಹುದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com