ಅತೃಪ್ತ ಶಾಸಕರ ವಿರುದ್ಧ ದೂರು : ಕಾಂಗ್ರೆಸ್ ನಾಲ್ಕು ಶಾಸಕರು ಅನರ್ಹರು

ಕಳೆದ ದಿನ ಬಜೆಟ್ ಮಂಡನೆಗೂ ಮುನ್ನ ಬಿಜೆಪಿ ಆಪರೇಷನ್ ಆಡಿಯೋ ರಿಲೀಸ್ ಆದ ಬಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿವೆ. ಇಷ್ಟು ದಿನ ನಾಲ್ವರು ಅತೃಪ್ತರ ಸಂಖ್ಯೆ ಇಂದು ದಿಢೀರನೇ ಐದಕ್ಕೇರಿದೆ. ಹೀಗೆ ದೋಸ್ತಿ ಸರ್ಕಾರದ ಅತೃಪ್ತ ಶಾಸಕರ ಸಂಖ್ಯೆ ಹತ್ತೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಜೆಟ್ ಮಂಡನೆ ವೇಳೆ ಹಾಜರಾಗಬೇಕಿದ್ದ ಶಾಸಕರು ಗೈರಾದ ಕಾರಣ ಅವರನ್ನು ಪಕ್ಷದಿಂದ ಕೈಬಿಡಲು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆ. ನಾಲ್ವರು ಅತೃಪ್ತರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ದೂರು ಕೂಡ ದಾಖಲಿಸಲಾಗಿದೆ.

50 ಕೋಟಿ ಸ್ಪೀಕರ್ ಗೆ ಕೊಟ್ಟು ಬಿಜೆಪಿ ಪಕ್ಷ ಕೊಂಡುಕೊಂಡಿದ್ದಾರೆ ಎನ್ನುವ ಆಪರೇಷನ್ ವಿಡಿಯೋ ಸಾಕ್ಷಿಯಾಗಿಟ್ಟುಕೊಂಡು ಕೂಡ ದೂರು ದಾಖಲಿಸಲಾಗಿದೆ. ಆಮಿಷ ವೊಡ್ಡಿ ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎನ್ನುವುದಕ್ಕೆ ಆಡಿಯೋ ಬಹುದೊಡ್ಡ ಸಾಕ್ಷಿಯಾದಾರಾದ ಮೇಲೆ ಸೆಕ್ಷನ್ 10 ರಡಿ  ದೂರು ನೀಡಲಾಗಿದೆ. 

ನಾಲ್ವರು ಅತೃಪ್ತರನ್ನು ಅನರ್ಹರು ಎಂದು ತಿಳಿಸಲಾಗಿದ್ದು, ಮುಂದಿನ ನಡೆಯ ಬಗ್ಗೆ ತೀವ್ರ ಕುತೂಹಲ ಸೃಷ್ಠಿಯಾಗಿದೆ.  ಉಮೇಶ್ ಜಾಧವ್, ನಾಗೇಂದ್ರ, ಮಹೇಶ್ ಕಮಟಳ್ಳಿ, ಗೋಕಾಕ್ ಶಾಸಕ, ಬಿ.ಸಿ ಪಾಟೀಲ್ ಕೂಡ ಅತೃಪ್ತರ ಗ್ಯಾಂಗ್ ಸೇರಿದ್ದಾರೆ. ಮುಂಬೈ ಖಾಸಗಿ ಹೋಟಲ್ ನಲ್ಲಿ ಬಿಜೆಪಿ ಇಂದು ಅತೃಪ್ತರೊಂದಿಗೆ ಸಭೆ ಮಾಡಲಿದ್ದು ಮಾಜಿ ಸಚಿವ ಬಾಬುರಾವ್ ಚುಂಚನಸೂರ್ ಕೂಡ ಹೋಟಲ್ ನಲ್ಲಿದ್ದು ಮುಂದಿನ ತೀರ್ಮಾನ ಮಾಡಲಿದ್ದಾರೆ. ಇನ್ನೂ ಮುಂದುವರೆದರೆ ಯಾವ ಶಾಸಕರು ಬಿಜೆಪಿ ಪಕ್ಷ ಸೇರುತ್ತಾರೆ ಅನ್ನೋದು ದೋಸ್ತಿ ಸರ್ಕಾರದಲ್ಲಿ ಸಂಚಲ ಮೂಡಿಸಿದೆ.

 

Leave a Reply

Your email address will not be published.

Social Media Auto Publish Powered By : XYZScripts.com