ನಾಲ್ವರು ಅತೃಪ್ತರ ಜೊತೆ ಮತ್ತೊಬ್ಬ ಅತೃಪ್ತ ಸೇರ್ಪಡೆ : ಅಸಲಿ ಆಟ ಶುರು
ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿದೆ. ಸೋಮವಾರ ರಾಜ್ಯ ರಾಜಕೀಯದಲ್ಲಿ ಅಸಲಿ ಆಟ ಶುರುವಾಗುವ ಸಾಧ್ಯತೆ ಇದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಭಿನ್ನರ ಗ್ಯಾಂಗ್ ಗೆ ಮತ್ತಷ್ಟು ಜನ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಮತ್ತೋರ್ವ ಶಾಸಕ ಬಿ.ಸಿ ಪಾಟೀಲ್ ಕೂಡ ಸೇರಿಕೊಂಡಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಮುಗಿದ ಬಳಿಕ ನಾಲ್ಕು ಜನ ಅತೃಪ್ತರು ಎಂದು ತಿಳಿದು ಬಂದಿತ್ತು. ಆದರೆ ದೋಸ್ತಿ ಸರ್ಕಾರದ ಅತೃಪ್ತ ಶಾಸಕರ ಸಂಖ್ಯೆ 10ಕ್ಕೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಶಾಸಕ ಉಮೇಶ್ ಜಾಧವ್, ನಾಗೇಂದ್ರ, ಮಹೇಶ್ ಕಮಟಳ್ಳಿ, ಗೋಕಾಕ ಶಾಸಕ ಸೇರಿದಂತೆ, ಸದ್ಯ ಬಿ.ಸಿ ಪಾಟೀಲ್ ಕೂಡ ಅತೃಪ್ತರ ಗ್ಯಾಂಗ್ ಸೇರಿದ್ದಾರೆ. ಮುಂಬೈ ಖಾಸಗಿ ಹೋಟಲ್ ನಲ್ಲಿ ಸಭೆ ನಡೆಯಲಿದ್ದು, ಬಿಜೆಪಿ ಹೈಕಮಾಂಡ್ ನಿರ್ಧಾರದ ಮೇಲೆ ಅತೃಪ್ತರ ನಡೆ ಕಂಡುಬರುತ್ತದೆ ಎನ್ನಲಾಗುತ್ತಿದೆ.