ಯಡಿಯೂರಪ್ಪ ತುರ್ತಾಗಿ ದೇವದುರ್ಗಕ್ಕೆ ಹೋಗಿದ್ದರ ಗುಟ್ಟು ಬಿಚ್ಚಿಟ್ಟ ಸಿಎಂ

ಗೃಹಕಚೇರಿ ಕೃಷ್ಣಾದಲ್ಲಿ ಸಿದ್ದಿಗೋಷ್ಠಿ ನಡೆಸಿದ ಸಿಎಂ ಯಡಿಯೂರಪ್ಪ ತುರ್ತಾಗಿ ದೇವದುರ್ಗಕ್ಕೆ ಹೋಗಿದ್ದರ ಗುಟ್ಟು ಬಿಚ್ಚಿಟ್ಟರು.

‘ಪ್ರತೀ ದಿನ ನೀವು ಮೈಕ್ ತಂದ್ರು ನಾನು ಮಾತನಾಡಿರಲಿಲ್ಲ. ನಿನ್ನೆ ದಿನ ನಿಮ್ಮ ಜೊತೆ ಔತಣ ಕೂಟ ಮಾಡಲು ಯೋಚಿಸಿದೆ ಆದರೆ ಆಗಿಲ್ಲ. ಬಜೆಟ್, ರಾಜಕೀಯ ಬೆಳವಣಿಗೆಗಳೇ ಅದಕ್ಕೆ  ಕಾರಣ. ಇವತ್ತು ತರಾತುರಿಯಲ್ಲಿ ಸುದ್ದಿ ಗೋಷ್ಠಿ ಕರೆದಿದ್ದೇನೆ. ಇದಕ್ಕೆ ಕಾರಣ ಕೂಡ ಇದೆ.’

‘ಮೋದಿ ಭ್ರಷ್ಟಾಚಾರದ ಬಗ್ಗೆ, ಕಪ್ಪು ಹಣದ ಬಗ್ಗೆ ಮಾತನಾಡುತ್ತಾರೆ. ದೇಗುಲ ಅಂತ ಮೋದಿ ಸಂಸತ್ ಮೆಟ್ಟಿಲುಗಳನ್ನು ನಮಿಸ್ಕರಿಸುತ್ತಾರೆ. ಸಾಲ ಮನ್ನ ಬಗ್ಗೆ ನಾನು ಮಾಡಿರುವ ಪ್ರಯತ್ನವನ್ನು ನ್ಯಾಷನಲ್ ಪೇಪರ್ ಗಳಿಗೆ ಸುದ್ದಿಕೊಟ್ಟಿದ್ದೇನೆ. ಮತ್ತೆ 35,000 ಕೋಟಿ ಸಾಲಮನ್ನ ಮಾಡಿದ್ದೇನೆ. ಆದರೆ ಮೋದಿ ಪಾರ್ಲಿಮೆಂಟ್ ನ್ನು ಹಾದಿ ತಪ್ಪಿಸುತ್ತಾರೆ. ಇದನ್ನು ಅತ್ಯಂತ ನೋವಿನಿಂದ ನಾನು ಹೇಳುತ್ತೇನೆ.’

‘ಕಪ್ಪು ಹಣವನ್ನು ನಿರ್ನಾಮ ಮಾಡಿದ್ದೇನೆ ಅಂತಾರೆ ಪ್ರಧಾನಿ ಅವರು. ಬಜೆಟ್ ನಲ್ಲಿ ಕೆಲವು ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರೆ ಬಿಜೆಪಿ ಸದಸ್ಯರು ಬಾವಿಗಿಳಿದು ಧರಣಿ ಮಾಡ್ತಾರೆ. ಗೋ ಬ್ಯಾಕ್ ಅಂತರೆ. ಮೈತ್ರಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾರ್ಚ 31 ಒಳಗೆ ಒಪ್ಪಿಸದೇ ಹೋದರೆ ಸಂಬಳಗಳೆಲ್ಲವೂ ನಿಂತು ಹೋಗುತ್ತವೆ. ಸರ್ಕಾರ ಹೇಗೆ ನಡೆಸಬೇಕು..?’

‘ಯಡಿಯೂರಪ್ಪ ಹಿರಿಯರಾಗಿದ್ದುಕೊಂಡು ಹೀಗೆಲ್ಲಾ ಮಾಡುತ್ತಿದ್ದಾರೆ. ಸದನದಲ್ಲಿ ಈ ಅಯವ್ಯಯವನ್ನು ಒಪ್ಪಿಗೆ ಪಡೆದು ಮಂಡನೆ ಮಾಡಲೇಬೇಕು. ಇಲ್ಲದೇ ಹೋದರೆ ಮುಂದಿನ ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತದೆ. ಇದೆಲ್ಲಾ ಗೊತ್ತಿದ್ದು ಬಿಜೆಪಿ ಅವರು ಏನ್ ಮಾಡ್ತಾಯಿದ್ದಾರೆ..? ಕಲಾಪ ನಾಡಿನ ಜನರ ಬದುಕಿನ ಪ್ರಶ್ನೆ ಇದು. ಕೊಡುವ ಕಾರ್ಯಕ್ರಮಗಳಿಂದ ನಾಡಿಗೆ ಏನ್ ಅನುಕೂಲವಾಗುತ್ತದೆ..? ಯಾವುದು ಆಗುವುದಿಲ್ಲ ಎಂದು ಮುಕ್ತವಾಗಿ ಚರ್ಚೆ ಮಾಡಿ.. ಆದರೆ ಸದಸನದಲ್ಲಿ ಅಗೌರವ ತರುವಂತೆ ನಡೆದುಕೊಂಡರೆ ಇದನ್ನ ಜನರು ತೀರ್ಮಾನ ಮಾಡುತ್ತಾರೆ.ಬಜೆಟ್ ಮಂಡನೆ ಮಾಡೋದು ಹುಡುಗಾಟವಲ್ಲ. ಇದರಿಂದ ದೇಶಕ್ಕೆ, ರಾಜ್ಯಕ್ಕೆ ಏನ್ ಸಂದೇಶ ಕೊಡಲು ಹೊರಟಿದ್ದೀರಾ..? ನಿನ್ನೆ ರಾತ್ರಿ 2 ಗಂಟೆಗೆ ನಮ್ಮ ಪಕ್ಷದವರಿಗೆ ಅಹ್ವಾನ ಕೊಡುತ್ತಾರೆ. ಇದು ಸರ್ಕಾರದ ಬಜೆಟ್ ಅಲ್ಲ ನಾಡಿನ ಜನತೆ ಬಜೆಟ್. ಬಿಜೆಪಿ ಶಾಸಕರಿಗೆ ನಾನು ಮನವಿ ಮಾಡುತ್ತಿದ್ದೇನೆ. ಗಲಾಟೆ ಮಾಡಿ ಆದರೆ ಬಜೆಟ್ ಗೆ ಅಡ್ಡಿ ಪಡಿಸಬೇಡಿ.’

‘ನಿಮ್ಮ ನಿಜವಾದ ಮುಖವಾಡ ತಿಳಿಯುತ್ತದೆ..’

‘ನಿನ್ನೆ ಯಡಿಯೂರಪ್ಪ ತುರ್ತಾಗಿ ದೇವದುರ್ಗಕ್ಕೆ ಹೋಗಿದ್ದರು.. ಯಾರೋ ಹಿರಿಯರು ನಿಧನರಾಗಿದ್ದರು ಎಂದು ಭಾವಿಸಿದ್ದೆ. ಆದರೆ ರಾತ್ರಿ 12 ಗಂಟೆಗೆ ಫೋನ್ ಕಾಲ್ ಮಾಡಿದ್ದರು. 2-3 ಕ್ಲಿಪ್ ನಿಮ್ಮ ಮುಂದೆ ಇಡುತ್ತೇನೆ. ಸರ್ಕಾರ ಬೀಳಿಸಲು ನೀವು ಏನ್ ಮಾಡಿದ್ದಾರೆ ಅಂತ ಗೊತ್ತು. ‘

‘ಸ್ಪೀಕರನ್ನು ನಾವು ಹತ್ತಿರದಿಂದ ನೋಡಿದ್ದೇವೆ. ಅಂತವರನ್ನು ಕೋಟಿ ಕೋಟಿ ಕೊಟ್ಟು ಕೊಂಡುಕೊಂಡಿದ್ದೇವೆ ಎಂದು ಹೇಳುತ್ತೀರಾ ಅಲ್ವಾ..? ಇದಕ್ಕೆಲ್ಲಾ ಹಣ ಎಲ್ಲಿಂದ ಬಂತು. ಜಡ್ಜ್ ಗಳನ್ನು ಕೊಂಡಿದ್ದಾರಂತೆ. ಶಾಸಕರ ಪುತ್ರನಿಗೆ ದೇವದುರ್ಗದಲ್ಲಿ ಭೇಟಿ ಮಾಡಲು ತಿಳಿಸಿ ಆಮಿಷ ಒಡ್ಡೊದ್ದೀರಾ..?’ ಇದಕ್ಕೆ ಸಾಕ್ಷಿಯಾಗಿ ಆಡಿಯೋ ರಿಲೀಸ್ ಮಾಡಿದರು ಸಿಎಂ.

 

Leave a Reply

Your email address will not be published.

Social Media Auto Publish Powered By : XYZScripts.com