ಯಡಿಯೂರಪ್ಪ,ಅಶ್ವತ್ಥ್ ನಾರಾಯಣ್ ವಿರುದ್ಧ ಶಾಸಕರನ್ನು ಅಪಹರಿಸಿದ ದೂರು

ಶಾಸಕರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಬಿಎಸ್ ಯಡಿಯೂರಪ್ಪ ಮತ್ತು ಅಶ್ವತ್ಥ್ ನಾರಾಯಣ್ ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಕೀಲ ಆರ್.ಎಲ್.ಎನ್. ಮೂರ್ತಿ ದೂರು ನೀಡಿದ್ದಾರೆ.

ಬಜೆಟ್ ಅಧಿಕವೇಶನಕ್ಕೆ ಹಾಜರಾಗದಂತೆ ತಡೆಯಲು ಈ ಇಬ್ಬರು ಅನೇಕ ಶಾಸಕರನ್ನು ಅಪಹರಿಸಿ ಕತ್ತಲೆ ಕೋಣೆಯಲ್ಲಿರಿಸಿದ್ದಾರೆ. ಈ ಮೂಲಕ ಜನರ ಕಷ್ಟಗಳ ಬಗ್ಗೆ ಅಧಿವೇಶನದಲ್ಲಿ ಮಾತನಾಡುವುದನ್ನು ತಪ್ಪಿಸಿದ್ದಾರೆ.

ಶಾಸಕರನ್ನು ಅಪಹರಣ ಮಾಡುವ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಬಿಎಸ್‍ವೈ ಮತ್ತು ಅಶ್ವತ್ಥ್ ನಾರಾಯಣ್ ವಿರುದ್ಧ ಕ್ರಮ ಕೈ ಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಬೇಕೋ ಬೇಡವೋ ಎಂಬುದರ ಬಗ್ಗೆ ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com