ರಣಜಿ ಟೂರ್ನಿಯ ಫೈನಲ್ ಪಂದ್ಯ : ಸೌರಾಷ್ಟ್ರ ಮಣಿಸಿದ ವಿದರ್ಭ ತಂಡ

ಗುರುವಾರ ನಡೆದ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಮಣಿಸಿದ ವಿದರ್ಭ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇರಾನಿ ಟೂರ್ನಿಗೆ ಶೇಷ ಭಾರತ ತಂಡದ ವಿರುದ್ಧ ಫೆ. 12 ರಿಂದ 16ರ ವರೆಗೆ ನಡೆಯಲಿರುವ ಟೂರ್ನಿಯಲ್ಲಿ ಕಾದಾಟ ನಡೆಸಲಿದೆ.

ಗುರುವಾರ ಶೇಷ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ತಂಡದಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ ಸಿಕ್ಕಿದೆ. ಮಾಯಾಂಕ್ ಅಗರ್ ವಾಲ್, ರೋನಿತ್ ಮೋರೆ ಹಾಗೂ ಕೆ.ಗೌತಮ್ ಸ್ಥಾನ ಪಡೆದಿದ್ದಾರೆ.

ಆಯ್ಕೆ ಸಮಿತಿ ಇದೇ ವೇಳೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯಲಿರುವ ಎರಡನೇ ನಾಲ್ಕು ದಿನಗಳ ಪಂದ್ಯಕ್ಕೂ ತಂಡವನ್ನು ಪ್ರಕಟಿಸಿದ್ದು, ಕರ್ನಾಟಕದ ಕೆ.ಎಲ್ ರಾಹುಲ್ ಗೆ ಪಟ್ಟ ಕಟ್ಟಲಾಗಿದೆ.

ಶೇಷ ಭಾರತ ತಂಡ: ಅಜಿಂಕ್ಯ ರಹಾನೆ (ನಾಯಕ), ಮಾಯಾಂಕ್ ಅಗರ್ ವಾಲ್, ಅನ್ಮೋಲ್ ಪ್ರೀತ್ ಸಿಂಗ್, ಹನುಮ ವಿಹಾರಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆ.ಗೌತಮ್, ಧರ್ಮೆಂದ್ರ ಸಿನ್ಹಾ ಜಡೇಜಾ, ರಾಹುಲ್ ಚಹಾರ್, ಅಂಕಿತ್ ರಜಪುತ್, ತನ್ವೀರ್ ಉಲ್-ಹಕ್, ರೋನಿತ್ ಮೋರೆ, ಸಂದೀಪ್ ವಾರಿಯರ್, ರಿಂಕು ಸಿಂಗ್, ಸ್ನೇಲ್ ಪಟೇಲ್.

ಭಾರತ ‘ಎ’ ತಂಡ: ಕೆ.ಎಲ್ ರಾಹುಲ್ (ನಾಯಕ), ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್, ಅಂಕಿತ್ ಬಾವನೆ, ಕರುಣ್ ನಾಯರ್, ರಿಕಿ ಭುಯಿ, ಸಿದ್ಧಾರ್ಥ್ ಲಾಡ್, ಕೆ.ಎಸ್.ಭರತ್ (ವಿಕೆಟ್ ಕೀಪರ್), ಶಹಬಾಜ್ ನದೀಮ್, ಜಲಜ್ ಸಕ್ಸೇನಾ, ಮಯಾಂಕ್ ಮಾರ್ಕಂಡೆ, ಶರ್ದೂಲ್ ಠಾಕೂರ್, ನವದೀಪ್ ಸೈನಿ, ವರುಣ್ ಆರೋನ್.

Leave a Reply

Your email address will not be published.

Social Media Auto Publish Powered By : XYZScripts.com