ಪುರುಷರ ‘ಎ’ ಡಿವಿಜನ್ ಹಾಕಿ ಚಾಂಪಿಯನ್ ಶಿಪ್ : ಕರ್ನಾಟಕ ತಂಡದ ಭರ್ಜರಿ ಪ್ರದರ್ಶನ

ಮಧ್ಯಪ್ರದೇಶದ ಗ್ವಾಲೀಯರ್ ನಲ್ಲಿ ನಡೆಯುತ್ತಿರುವ ಸೀನಿಯರ್ ಪುರುಷರ ‘ಎ’ ಡಿವಿಜನ್ ಹಾಕಿ ಚಾಂಪಿಯನ್ ಶಿಪ್ ನ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ಸ್‍ ನಲ್ಲಿ ಸೋಲು ಕಂಡಿದೆ.

ಗುರುವಾರ ನಡೆದ ಪಂದ್ಯದಲ್ಲಿ ಎಸ್.ವಿ ಸುನಿಲ್ ಪಡೆ 5-0 ಗೋಲುಗಳ ಅಂತರದಿಂದ ರೈಲ್ವೇಸ್ ಸ್ಪೋರ್ಟ್ಸ್ ಪ್ರಮೋಷನ್ ತಂಡದ ವಿರುದ್ಧ ಪರಾಜಯಗೊಂಡಿದೆ. ರೈಲ್ವೆ ತಂಡದ ಪರ ಅಮಿತ್ 10 ಹಾಗೂ 41ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಪ್ರತಾಪ್ ಲಕ್ರಾ (21ನೇ ನಿಮಿಷ) ಹಾಗೂ ಹ‍ರ್ ಸಾಹೀಬ್ ಸಿಂಗ್ (48ನೇ ನಿಮಿಷ) ಗೋಲು ಗಳಿಸಿ ತಂಡವನ್ನು ಸೆಮಿಫೈನಲ್ಸ್ ಗೆ ಕೊಂಡೊಯ್ದರು.

ಕರ್ನಾಟಕ ಎಂಟರ ಘಟ್ಟದ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾದ ಸೋಲು ಕಂಡಿದೆ. ಉಳಿದಂತೆ ಹಾಕಿ ಪಂಜಾಬ್, ಪೆಟ್ರೋಲಿಯಂ ಸ್ಪೋರ್ಟ್ಸ್‍ ಪ್ರಮೋಷನ್ ಬೋರ್ಡ್‍, ಪಂಜಾಬ್ ಹಾಗೂ ಸಿಂದ್ ಬ್ಯಾಂಕ್ ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ.

Leave a Reply

Your email address will not be published.

Social Media Auto Publish Powered By : XYZScripts.com