ಭಾರತ ಕ್ರಿಕೆಟ್ ಪ್ರಿಯರ ದಿನ : ಕನ್ನಡಿಗ ಅನಿಲ್ ಕುಂಬ್ಳೆ ಅವರ ಸಾಧನೆ ಅಪಾರ

ಈ ಪಂದ್ಯದ ನೆನಪು ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಪ್ರತಿಯೋಬ್ಬ ಕ್ರಿಕೆಟ್ ಅಭಿಮಾನಿಯೂ ಸಹ ಈ ಪಂದ್ಯದ ಬಗ್ಗೆ ಮಾತನಾಡಿರುತ್ತಾನೆ. ವಿಶ್ವ ಕ್ರಿಕೆಟ್ ನಲ್ಲಿ ತನ್ನ ಹೆಜ್ಜೆ ಗುರುತನ್ನು ನಿಚ್ಛಳವಾಗಿ ಮೂಡಿಸುವಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಅವರ ಸಾಧನೆ, ಇನ್ನು ಅಭಿಮಾನಿಗಳ ಮನದಲ್ಲಿ ಹಸಿರಾಗಿದೆ.

ಫೆ.7 ಈ ದಿನ ಭಾರತ ಕ್ರಿಕೆಟ್ ಪ್ರಿಯರು ಎಂದು ಮರೆಯದ ದಿನ. ಭಾರತ- ಪಾಕಿಸ್ತಾನ ತಂಡಗಳು ಎರಡನೇ ಟೆಸ್ಟ್‍ ನಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಕಾದಾಟ ನಡೆಸಿದ್ದವು. ಈ ಪಂದ್ಯದ ಎರಡನೇ ಇನ್ನಿಂಗ್ಸ್‍ ನಲ್ಲಿ ಅನಿಲ್ ಕುಂಬ್ಳೆ ಪಾಕ್, ತಂಡದ ಹತ್ತೂ ವಿಕೆಟ್ ಪಡೆದು ಇತಿಹಾಸದ ಪುಟ ಸೇರಿದ್ದರು. ಈ ಸಾಧನೆಗೆ ಗುರುವಾರಕ್ಕೆ ಭರ್ತಿ 20 ವರ್ಷ ತುಂಬಿದೆ.

ಪಾಕ್ ವಿರುದ್ಧ ಅನಿಲ್ 26.3 ಓವರ್ ಬೌಲಿಂಗ್ ಮಾಡಿ 74 ರನ್ ನೀಡಿ 10 ವಿಕೆಟ್ ಕಬಳಿಸಿದ್ದರು. ಭಾರತ, ಪಾಕ್ ತಂಡವನ್ನು ಬಗ್ಗು ಬಡೆದಿತ್ತು. ಪಾಕ್ ಪಂದ್ಯ ಗೆಲ್ಲಲು 420 ರನ್ ಗುರಿಯನ್ನು ಭಾರತ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡ 60.3 ಓವರ್ ಗಳಲ್ಲಿ 207 ರನ್ ಗಳಿಗೆ ಸರ್ವಪತನ ಕಂಡಿತ್ತು. ಈ ಪಂದ್ಯದಲ್ಲಿ ಕುಂಬ್ಳೆ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದು, 1956 ರಲ್ಲಿ ಇಂಗ್ಲೆಂಡ್ ನ ಜಿಮ್ ಲೇಕರ್ ಸಾಧನೆಯನ್ನು ಸರಿಗಟ್ಟಿದರು.

Leave a Reply

Your email address will not be published.

Social Media Auto Publish Powered By : XYZScripts.com