ಭಾರತ ‘ಎ’ ಹಾಗೂ ಫ್ರಾನ್ಸ್ ‘ಎ’ ವನಿತೆಯರು ಹಾಕಿ ಟೂರ್ನಿಯಲ್ಲಿ ಮುಖಾಮುಖಿ

ಭಾರತ ‘ಎ’ ಹಾಗೂ ಫ್ರಾನ್ಸ್ ‘ಎ’ ವನಿತೆಯರು ಶುಕ್ರವಾರದಿಂದ ಆರಂಭವಾಗಲಿರುವ ಹಾಕಿ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದಾರೆ.

ಭಾರತ ತಂಡವನ್ನು ಸಲಿಮಾ ಟೆಟೆ ಮುನ್ನಡೆಸಲಿದ್ದಾರೆ. ಪಂದ್ಯಕ್ಕೂ ಮುನ್ನಾದಿನ ಮಾತನಾಡಿದ ಕೋಚ್ ಬಲ್ಜೀತ್ ಸಿಂಗ್, ಈ ಟೂರ್ನಿ ಯುವ ಆಟಗಾರರಿಗೆ ಸಹಾಯಕ. ದೊಡ್ಡ ಪಂದ್ಯಗಳಲ್ಲಿ ಹೇಗೆ ಆಡಬೇಕು ಎಂಬುದರ ಬಗ್ಗೆ ಅರಿವು ನೀಡುತ್ತದೆ. ಎದುರಾಳಿಗಳಿಗೆ, ಬಲಿಷ್ಠ ಪೈಪೋಟಿ ನೀಡುವ ವಿಶ್ವಾಸವಿದೆ ಎಂದಿದ್ದಾರೆ.

ಸಂಘಟಿತ ಆಟದ ಮೇಲೆ ಒತ್ತು ನೀಡಲಾಗಿದ್ದು, ಜಯದ ವಿಶ್ವಾಸವಿದೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಟಗಾರ್ತಿಯರು ತಮ್ಮ ಶ್ರೇಷ್ಠ ಆಟದ ಪ್ರದರ್ಶನ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಿರಿಯರ ತಂಡಕ್ಕೆ ಒಂದು ವರ್ಷದಲ್ಲಿ ಕಡಿಮೆ ಪಂದ್ಯ ಸಿಗುತ್ತದೆ. ಇದನ್ನು ಮನಗೊಂಡು ಭಾರತ ಹಾಗೂ ಫ್ರಾನ್ಸ್ ಸಂಸ್ಥೆಗಳು ಮಹತ್ತರ ಹೆಜ್ಜೆಯನ್ನು ಇಟ್ಟಿವೆ. ದೊಡ್ಡ ಪಂದ್ಯಗಳ ಅನುಭವ ಪಡೆಯಲು ಈ ಟೂರ್ನಿ ಮಹತ್ವದಾಗಿದೆ ಎಂದು ಬಲ್ಜೀತ್ ಹೇಳಿದ್ದಾರೆ.  

Leave a Reply

Your email address will not be published.

Social Media Auto Publish Powered By : XYZScripts.com