ಐ-ಲೀಗ್ ಫುಟ್ಬಾಲ್ ಟೂರ್ನಿ : ಚೆನ್ನೈ ಎಫ್.ಸಿ ತಂಡಕ್ಕೆ ಇಂಡಿಯನ್ ಏರೋಸ್ ಸವಾಲು

12ನೇ ಆವೃತ್ತಿಯ ಐ-ಲೀಗ್ ಫುಟ್ಬಾಲ್ ಟೂರ್ನಿಯ ಅಗ್ರ ಸ್ಥಾನದ ಮೇಲೆ ಕಣ್ಣು ನೆಟ್ಟಿರುವ ಚೆನ್ನೈ ಸಿಟಿ ಎಫ್.ಸಿ ತಂಡ, ಶುಕ್ರವಾರ ಇಂಡಿಯನ್ ಏರೋಸ್ ತಂಡದ ಸವಾಲು ಎದುರಿಸಲಿದೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಉಭಯ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಚೆನ್ನೈ ಎಫ್.ಸಿ. 4-1 ರಿಂದ ಏರೋಸ್ ತಂಡವನ್ನು ಮಣಿಸಿತ್ತು.

ಚೆನ್ನೈ ತಂಡದ ಪೆಡ್ರೊ ಜೇವಿಯರ್ ಎಂ ಟೂರ್ನಿಯಲ್ಲಿ 13 ಗೋಲು ಬಾರಿಸಿ ಅಬ್ಬರಿಸಿದ್ದಾರೆ. ಇನ್ನೋರ್ವ ಸ್ಟಾರ್ ಆಟಗಾರ ನೆಸ್ಟರ್ ಜೀಸಸ್ ಜಿ ಆರು ಗೋಲು ಸಿಡಿಸಿದ್ದು, ಗರಿಷ್ಠ ಗೋಲು ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಏರೋಸ್ ತಂಡ, ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಆಡಿದ 16 ಪಂದ್ಯಗಳಲ್ಲಿ 5 ಜಯ ದಾಖಲಿಸಿರುವ ತಂಡ, 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಶುಕ್ರವಾರದ ಪಂದ್ಯದಲ್ಲಿ ಏರೋಸ್ ಸವಾಲನ್ನು ಮೆಟ್ಟಿ ನಿಂತು ಪೂರ್ಣ ಅಂಕ ಕಲೆ ಹಾಕಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಕನಸು ಚೆನ್ನೈ ಎಫ್.ಸಿ ತಂಡದ್ದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com