ಇಂದು ಶೃಂಗೇರಿಯ ಶಾರದಾ ಮಠಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ ಸಾಧ್ಯತೆ

ದಿನಕ್ಕೊಂದು ರಾಜಕೀಯ ಚದುರಂಗದಾಟದಿಂದ ಕಂಗಲಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಶುಕ್ರವಾರ ಮತ್ತೆ ಶೃಂಗೇರಿಯ ಶಾರದಾ ಮಠಕ್ಕೆ ಬರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ತಿಳಿಸಿವೆ.

ಬಜೆಟ್ ಮುಗಿಸಿ ಸಂಜೆ ನಾಲ್ಕು ಗಂಟೆಗೆ‌ ಬೆಂಗಳೂರು ಬಿಡಲಿರುವ ಸಿಎಂ, ಕುರ್ಚಿಗಾಗಿ ಮತ್ತೆ ದೈವದ ಮೊರೆ ಹೋಗ್ತಾರಾ ಎಂಬ ಮಾತು ಕೇಳಿಬರುತ್ತಿದೆ. ಈ ಹಿಂದೆಯೂ ಸರ್ಕಾರಕ್ಕೆ ಅಸ್ಥಿರತೆ ಉಂಟಾದಾಗ ಕುಮಾರಸ್ವಾಮಿ ಅವರು ಶೃಂಗೇರಿಗೆ ಭೇಟಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಕೂಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆಯಿದೆ. ದೇವೇಗೌಡರ ಕುಟುಂಬ ಪಟ್ಟಕ್ಕಾಗಿ ಅತಿರುದ್ರ ಮಹಾಯಾಗ ನಡೆಸಿತ್ತು. ಅಷ್ಟೇ ಅಲ್ಲ, ಸಿಎಂ ಆದ ಮೇಲೆ ಕುಮಾರಸ್ವಾಮಿ ಅವರು ಐದು ಬಾರಿ ಶೃಂಗೇರಿಗೆ ಬಂದಿದ್ದರು.

ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿಶೂಲಿನಿ ಯಾಗ ಮಾಡಿಸಿದ್ದ ಕುಮಾರಸ್ವಾಮಿ, ಬಂದಾಗೆಲ್ಲಾ ಒಂದೊಂದು ವಿಶೇಷ ಪೂಜೆ ಕೈಗೊಳ್ಳುತ್ತಾರೆ. ಇದೀಗ ಶೃಂಗೇರಿ ಶಾರದಾಂಬೆ ಕುಮಾರಸ್ವಾಮಿ ಕೈ ಹಿಡಿವಳೋ-ಬಿಡುವಳೋ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published.